ರಾಯಚೂರು ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟದಿAದ ನಿಷೇಧ ಹೇರುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು
ಈಡೇರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿAದ ಹಮ್ಮಿ ಕೊಂಡಿದ್ದ ಕರ್ನಾಟಕ ಬಂದ್‌ಗೆ ಶನಿವಾರ ನಗರ ಸೇರಿದಂತೆ ಜಿಲ್ಲಾಧ್ಯಂತ ನೀರಸ ಪ್ರತಿಕ್ರಿಯೆ ದೊರೆಯಿತು.
ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್ ಸೇರಿದಂತೆ ಕೆಲವು ಬಟ್ಟೆ ಅಂಗಡಿಗಳು ಬಂದ್ ಆಗಿರುವುದು ಬಿಟ್ಟರೆ ಉಳಿದ ವ್ಯಾಪಾರ ವಹಿವಾಟು, ಬಸ್ ಸಂಚಾರ, ಆಟೋ ಸಂಚಾರ ಯಥಾ ರೀತಿಯಾಗಿ ಮುಂದು ವರೆಯಿತು. ಕರವೇ, ಸುವರ್ಣ ಕರ್ನಾಟಕ ರಕ್ಷಣಾ ಸೇನೆ, ಎಸ್‌ಡಿಪಿಐ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಕನ್ನಡ ಮಿತ್ರಕೂಟ, ಜನಸಂಗ್ರಾಮ ಪರಿಷತ್ತು, ಕನ್ನಡ ಸೇನೆ ಕರ್ನಾಟಕ,ಸೂರ್ಯೋದಯ ವಾಕೀಂಗ್ ಕ್ಲಬ್, ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲಿಸಿದವು.
ಏಮ್ಸ್ ಹೋರಾಟ ಸಮಿತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮಾಡುವ ಮೂಲಕ ಬಂದ್‌ಗೆ ಬೆಂಬಲಿಸುವAತೆ ಅಂಗಡಿ ಮುಂಗಟ್ಟುಗಳಿಗೆ ಸಂಘಟನೆಯಿAದ ಮನವಿ ಮಾಡಲಾಯಿತು.
ನಂತರ ವಿವಿಧ ಸಂಘಟನೆಗಳಿAದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಎಂಇಎಸ್ ನಾಡದ್ರೋಹಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು.
ಈಡೀ ರಾಜ್ಯದ ಗಡಿನಾಡುಗಳನ್ನು ಅಭಿವೃದ್ಧಿಪಡಿಸಬೇಕು. ಎಂಇಎಸ್ ನಿಷೇದ ಮಾಡುವ ಮೂಲಕ ಬೆಳಗಾವಿಯನ್ನು ಉಳಿಸಬೇಕು, ಶಿವಸೇನೆ ಮತ್ತು ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು, ಬೆಳಗಾವಿ ಜಿಲ್ಲೆಯಲ್ಲಿ ಅಽಕಾರದಲ್ಲಿರುವ ಎಲ್ಲ ರಾಜಕಾರಣಿಗಳು ರಾಜೀನಾಮೆ ನೀಡಬೇಕು. ಬೆಳಗಾವಿಯಲ್ಲಿ ನಿರ್ಮಿಸಲಾದ ಸಾಂಬಾಜಿ ಪ್ರತಿಮೆಯನ್ನು ತೆರವುಗೊಳಿಸಬೇಕು. ಕನ್ನಡದ ಕಂಡಕ್ಟರ್ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ಆಗಬೇಕು. ಮಹದಾಯಿ ಕಳಸಬಂಡೂರಿ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಮಾತನಾಡಿ, ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ದಿನಗಳಿಂದ ಏಮ್ಸ್ಗಾಗಿ ಹೋರಾಟ ನಡೆಯುತ್ತಿದ್ದು, ಇದಲ್ಲದೇ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟವು ಅತಿರೇಖಕ್ಕೆ ತಲುಪಿದ್ದು,ರಾಜ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷತನವನ್ನುಬ ಖಂಡನೇ ಮಾಡುವೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು,
ಆದರೆ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸೌಲಭ್ಯಗಳನ್ನು ಹಾಗೂ
ಯೋಜನೆಗಳನ್ನು ನೀಡುತ್ತಿಲ್ಲ. ಎಂ.ಇ.ಎಸ್ ಪುಂಢರು ತಮ್ಮ ಗೂಂಡಾ ವರ್ತನೆಯನ್ನು ಮುಂದುವರೆಸಿದ್ದು, ಅದನ್ನು ನಿಲ್ಲಿಸಲು ಸರ್ಕಾರ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಪ್ರಮುಖರಾದ ಎಸ್.ಮಾರೆಪ್ಪ, ಅಕ್ಬರ್ ಹುಸೇನ್ ನಾಗುಂಡಿ, ವೆಂಕಟೇಶ ಬೇವಿನಬೆಂಚಿ, ಜಾನ್ ವೆಸ್ಲಿ, ರಾಮಣ್ಣ ಮ್ಯಾದಾರ, ಸಾದಿಕ್ ಖಾನ್, ಎಂ.ಜಿ.ವೀರೇಶ, ಜಗದೀಶ ಪೂರತಿಪ್ಲಿ, ಜೈಭೀಮ್, ಮಲ್ಲಿಕಾರ್ಜುನ, ಜಾನಕಿರಾಂ, ರಾಜಶೇಖರ, ಅಶೋಕ, ಸಾಜೀದ್ ಸೇರಿದಂತೆ ಅನೇಕರು ಇದ್ದರು.