ಜಿಲ್ಲೆ

ಹಣಕಾಸಿನ ಸಮಸ್ಯೆಯಿಂದ ನಾಪತ್ತೆ

ಇಂದಿರಾ ಎನ್ ಕೆ

ಕುಂದಾಪುರ: ಕಾವ್ರಾಡಿ ಗ್ರಾಮದ ಮೂಡುವಾಲ್ತೂರು ನಿವಾಸಿ ಸಂತೋಷ ಕುಲಾಲ್(30) ಎಂಬುವರು ಫೈನಾನ್ಸ್ ಸೊಸೈಟಿಯಲ್ಲಿ ಸಾಲ ಮಾಡಿಕೊಂಡಿದ್ದು, ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಮೇ 11ರಂದು ಮಧ್ಯಾಹ್ನ ನೇರಳಕಟ್ಟೆಯ ಎಟಿಎಂನಿಂದ ಹಣ ತರುವುದಾಗಿ ಹೇಳಿ ಹೋದವನು ಈವರೆಗೂ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಾಯಿ ಸೀತು ಕುಲಾಲ್ತಿ ಎಂಬುವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.