ಮಾನ್ವಿ: ಅಂಗವಿಕಲರ ಅನುದಾನ ಬಳಕೆಗೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಆರ್.ಪಿ.ಡಿ.ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಶನಿವಾರ ತಾಪಂ ಸಹಾಯಕ ನಿರ್ದೇಶಕಿ ದೀಪಾಗೆ ಮನವಿ ಸಲ್ಲಿಸಿತು.
ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್ ಜಾಫರ್ ಮಾತನಾಡಿ, ಕಳೆದ 4 ವರ್ಷಗಳಿಂದ ಅಂಗವಿಕಲರ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ಗ್ರಾಪಂ, ತಾಪಂ, ಜಿಪಂಗಳಲ್ಲಿ ಅಂಗವಿಕಲರಿಗೆ ಶೇ.5 ಅನುದಾನ ಮೀಸಲಿಡಲಾಗಿದೆ. ಈ ಅನುದಾನವನ್ನು ಕೇವಲ ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಗೆ ಅವಕಾಶವಿದೆ. ಸರ್ಕಾರ 2020ರ ನಿಯಮವನ್ನು ಪರಿಷ್ಕರಿಸಿ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಮತ್ತು ಗ್ರಾಪಂನಲ್ಲಿ ಬಳಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಆಗ್ರಹಿಸಿದರು.