ಕಾರವಾರ: ವಿಕಲಚೇತನರು ತಮ್ಮಲ್ಲಿನ ಕೊರತೆಯನ್ನು ಮಟ್ಟಿನಿಂತು ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುವಂತಾಗಬೇಕು ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
ಅವರು ಬುಧವಾರ ಕಾರವಾರದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ,ಭಾರತ ಸರ್ಕಾರದ ಅಡಿಪ್ ಯೋಜನೆಯಡಿಯಲ್ಲಿ, ಕಾರವಾರ ತಾಲೂಕಿನ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು. ಪ್ರಸ್ತುತ ವಿಕಲಚೇತನರಿಗೆ ನೆರವಾಗಲು ಅನೇಕ ಸಾಧನ ಸಲಕರಣೆಗಳು ಲಭ್ಯವಿದ್ದು , ಅವುಗಳನ್ನು ಬಳಸಿಕೊಂಡು ಆತ್ಮ ವಿಶ್ವಾಸದಿಂದ ವಿಶೇಷ ಸಾಧನೆಗಳನ್ನು ಮಾಡಬೇಕು, ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು, ನಿಮ್ಮ ಅಭಿವೃದ್ದಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ತಾಲೂಕಿನ 129 ದಿವ್ಯಾಂಗರಿಗೆ 11.54 ಲಕ್ಷ ರೂ ಮೌಲ್ಯದ ವಿವಿಧ ಬಗೆಯ 359 ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ತಾ.ಪಂ. ಕಾರ್ಯನಿರ್ವಹಣಾದಿಕಾರಿ ವೀರನಗೌಡ ಪಿ ಏಗನಗೌಡರ್ , ವಿಕಲಚೇತನ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ
ರಾಘವೇಂದ್ರ ಭಟ್, ಅಲಿಮ್ಕೋದ ಕಾರ್ಯಕ್ರಮ ಆಯೋಜಕ ಅಭಿಷೇಕ್ ಕುಮಾರ್ ಆನಂದ್ ಮತ್ತಿತರರು ಇದ್ದರು.