ನಾಲತವಾಡ: ಬಸವೇಶ್ವರ ವೃತ್ತದ ಸಮೀಪದ ಅರಳಿಕಟ್ಟಿ ಸುತ್ತಮುತ್ತಲ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದು. 
ಜಿಲ್ಲೆ

ಮಲೀನ ನೀರು ಸಂಗ್ರಹ, ಸಾಂಕ್ರಾಮಿಕ ರೋಗದ ಭೀತಿ

ನಾಲತವಾಡ : ಬಸವೇಶ್ವರ ವೃತ್ತದ ಸಮೀಪದ ಅರಳಿಕಟ್ಟಿ ಸುತ್ತಮುತ್ತಲ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಮಳೆ ನೀರು ಹೊರ ಹೋಗುವ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂಬ ಸಾರ್ವಜನಿಕರ ಮನವಿಗೆ ಪಟ್ಟಣ ಪಂಚಾಯಿತಿ ಗಮನ ಹರಿಸುತ್ತಿಲ್ಲ್ಲ ಎಂದು ನಾಗರಿಕರು ದೂರಿದ್ದಾರೆ.

ಡಾ. ರಾಜು ಗಲಗಲಿ ಆಸ್ಪತ್ರೆಯಿಂದ ಬಸಣ್ಣ ವಡಗೇರಿ ಅಂಗಡಿವರೆಗಿನ ರಸ್ತೆ ಮೇಲೆ ಸ್ವಲ್ಪ ಮಳೆಯಾದರೂ ನೀರು ನಿಲ್ಲುತ್ತದೆ. ಆಸ್ಪತ್ರೆಗೆ ಹೋಗುವ ರೋಗಿಗಳು, ಕಿರಾಣಿ ಅಂಗಡಿಗೆ ತೆರಳುವ ಗ್ರಾಹಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಿಂತ ಕೆಳಗಿರಬೇಕಾದ ಚರಂಡಿಗಳು, ರಸ್ತೆಗಿಂತ ಎತ್ತರದಲ್ಲಿವೆ. ಹೀಗಾಗಿ ಮಳೆ ಬಂದಾಗ ನೀರು ಚರಂಡಿಗೆ ಸೇರದೇ ರಸ್ತೆ ಮೇಲೆ ನಿಲ್ಲುತ್ತವೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಸಮಸ್ಯೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಸಮಸ್ಯಗೆ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.