ಐಗಳಿ: ಸಮೀಪದ ಬನ್ನೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಭಾನುವಾರ ಜರುಗಿತು.
‘ಸಾಮಾನ್ಯ ಸಾಲಗಾರ’ ಕ್ಷೇತ್ರದಿಂದ ಅಡಿವೆಪ್ಪ ಗುಗ್ಗರಿ, ಗುರುಲಿಂಗಪ್ಪ ಕಾಮನ, ಚನ್ನಪ್ಪ ಶೇಗಾಂವಿ, ಬಸನಗೌಡ ಪಾಟೀಲ, ಬಸಪ್ಪ ಮುಂಜಿ, ‘ಬಿನ್ ಸಾಲಗಾರ’ ಕ್ಷೇತ್ರದಿಂದ ಗೌರಾಬಾಯಿ ರಾವೂರ, ಮಹಿಳಾ ಕ್ಷೇತ್ರದಿಂದ ಅಮಜವ್ವ ಆರುಟಗಿ, ಮಹಾದೇವಿ ಕುಂಠೋಜಿ. ‘ಹಿಂದುಳಿದ ಅ’ ವರ್ಗದಿಂದ ಪೀರಸಾಬ್ ಮುಲ್ಲಾ, ‘ಹಿಂದುಳಿದ ಬ’ ವರ್ಗದಿಂದ ಸಂತೋಷ ಪೂಜಾರಿ, ‘ಪರಿಶಿಷ್ಟ ಜಾತಿ’ ವರ್ಗದಿಂದ ಭೀಮಪ್ಪ ಮ್ಯಾಲಕೇರಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಆಶಾ ಬಿರಾದಾರ ಘೋಷಿಸಿದರು.
ಬಸವೇಶ್ವರ ರೈತ ಕಲ್ಯಾಣ ಪೆನಲ್ ಸದಸ್ಯರು, ಸಹಕಾರಿ ಧುರೀಣರು ಇತರರಿದ್ದರು.