ಡಾ ಸುಧೀರ್ ಎಂ.  
ಜಿಲ್ಲೆ

ನಿಟ್ಟೆ ಅಂಗ ಸಂಸ್ಥೆ ನಿರ್ದೇಶಕರಾಗಿ ಡಾ.ಸುಧೀರ್ ಎಂ.

ಇಂದಿರಾ ಎನ್ ಕೆ

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಉದ್ಯಮಾಡಳಿತ (ಎಂ.ಬಿ.ಎ) ಸಂಸ್ಥೆಯ ನಿರ್ದೇಶಕರಾಗಿ ಹಳೇ ವಿದ್ಯಾರ್ಥಿ ಡಾ.ಸುಧೀರ್ ಎಂ. ಅಧಿಕಾರ ಸ್ವೀಕರಿಸಿದರು. ಅವರು ಇಪತ್ತನಾಲ್ಕು ವರ್ಷಗಳ ಸುಧೀರ್ಘ ಅಧ್ಯಾಪನ, ಸಂಶೋಧನಾ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ನೆರವೇರಿಸಿದ್ದು, ಎಂ.ಬಿ.ಎ ಮಾರ್ಕೆಟಿಂಗ್, ಸ್ಟ್ರಾಟೆಜಿ, ಸಿಎಸ್‌ಆರ್ ಮತ್ತು ಗ್ರಾಹಕರ ವರ್ತನೆಗೆ ಸಂಬಂಧಿಸಿ ಸಾಕಷ್ಟು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ, ಕಲಿಕಾ ವಿನೂತನ ಪ್ರಯೋಗಗಳನ್ನು ಅನುಭವೀ ಕಲಿಕೆ ಮತ್ತು ಕಾರ್ಪೋರೇಟ್ ಕತೆಗಳನ್ನು ಸಮನ್ವಯಗೊಳಿಸಿ ಸಾಕಷ್ಟು ಆವಿಷ್ಕಾರಗಳನ್ನು ಕೈಗೊಂಡಿದ್ದು, ಮಾರ್ಕೆಟಿಂಗ್, ಗ್ರಾಹಕ ಸಂಬಂಧಗಳು, ಟೀಂ ನಿರ್ವಹಣೆ, ನಾಯಕತ್ವ, ವೈಯಕ್ತಿಕ ಉತ್ಕೃಷ್ಟತೆ ಇತ್ಯಾದಿ ವಿಷಯಗಳ ಕುರಿತು ಕಾಪೋರೇಟ್ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.