election 
ಜಿಲ್ಲೆ

ತೈಲಗೆರೆ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಕುಂದಾಣ
ದೇವನಹಳ್ಳಿ ತಾಲೂಕಿನ ತೈಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನೂತನವಾಗಿ ಡೇರಿ ನಿರ್ದೇಶಕ ಸ್ಥಾನಗಳಿಗೆ ಮುನೇಗೌಡ, ಮುನಿರಾಜು, ಗೋಪಾಲ್, ಮುನಿಬಚ್ಚಪ್ಪ, ಮುನಿಯಪ್ಪ, ಪಾರ್ವತಮ್ಮ, ಗಾಯಿತ್ರಿ, ಸುಗುಣಾ, ಸಜಾತಾ, ಮುನಾಂಜಿನಪ್ಪ, ಮಂಜುನಾಥ್, ಮುನಿಶಾಮಪ್ಪ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಹರೀಶ್ ೋಷಿಸಿದರು.
ಕಾರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಹಾಗೂ ಹಾಲು ಉತ್ಪಾದಕ ಲಕ್ಷ್ಮೀಚಂದ್ರು ಮಾತನಾಡಿ, ಗ್ರಾಮದ ಹಾಲು ಉತ್ಪಾದಕರ ಅನುಕೂಲಕ್ಕಾಗಿ 1986ರಲ್ಲಿ ಡೇರಿ ಸ್ಥಾಪನೆಗೊಂಡಿದ್ದು, ಅಲ್ಲಿಂದ ಇಲ್ಲಿವರೆಗೆ ಜೆಡಿಎಸ್ ಅಧಿಕಾರದಲ್ಲಿ ಮುಂದುವರಿಯುತ್ತಾ ಬಂದಿರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡರೆ, ಜೆಡಿಎಸ್ 10 ಸ್ಥಾನಗಳನ್ನು ಗೆಲ್ಲುವ ಮೂಲಕ 2024-25ನೇ ಸಾಲಿನಲ್ಲೂ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಪ್ರಸ್ತುತ ಒಟ್ಟು 102 ಹಾಲು ಉತ್ಪಾದಕರಿದ್ದು, ಡೇರಿಯಲ್ಲಿ ಪ್ರತಿದಿನ 1000ಲೀ. ಹಾಲು ಶೇಕರಣೆ ಮಾಡಿ, ಬೆಂಗಳೂರಿನ ಡೇರಿಗೆ ಸರಬರಾಜು ಮಾಡುತ್ತಿದೆ. ಗೆಲುವು ಸಾಧಿಸಿದ ನಿರ್ದೇಶಕರು ರೈತರಿಗೆ ಅಗತ್ಯ ಸೇವೆಗಳನ್ನು ಸಕಾಲಕ್ಕೆ ನೀಡಿ, ಪಾರದರ್ಶಕ, ಪ್ರಾಮಾಣಿಕವಾಗಿ ಸೇವೆ ನೀಡುವಂತೆ ಶುಭ ಹಾರೈಸಿದರು.
ಮುಖಂಡರಾದ ಮಂಜುನಾಥ್, ಮುರಳಿ, ಚಿಕ್ಕಪಟಾಲಪ್ಪ, ಮರಿಶಾಮಪ್ಪ, ಲೋಕೇಶಯ್ಯ ಇದ್ದರು.