ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಗೆಲುವು ಪಡೆದ ಅಭ್ಯರ್ಥಿಗಳು. 
ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕ ಆಯ್ಕೆ

ಸಿದ್ದಾಪುರ: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆಲುವು ದಾಖಲಿಸಿದ್ದಾರೆ.

ಪಾಲಿಬೆಟ್ಟದ ಮಹಿಳಾ ಸಮಾಜ ಸಭಾಂಗಣದಲ್ಲಿ ಸಂಘದ 13 ನಿರ್ದೇಶಕ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 29 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಜ್ಜಿನಿಕಂಡ ಶ್ಯಾಂಚದ್ರ, ಕುಟ್ಟಂಡ ಅಜಿತ್ ಕರುಂಬಯ್ಯ, ಕೊಲ್ಲಿರ ಧರ್ಮಜ, ಮಾಳೇಟಿರ ಪವಿತ್ರಾ, ವಿ.ವಿ.ಡಾಲು, ಕುಪ್ಪಂಡ ಅನಿತಾ ಸುರೇಶ್, ಪುಲಿಯಂಡ ಶೋಭಾ ಕುಟ್ಟಪ್ಪ, ಎಂ.ಟಿ.ಗ್ರೇಸಿ, ಟಿ.ಜಿ.ವಿಜೇಶ್, ಎಚ್.ಕೆ.ದಿನೇಶ್, ಸೋಮೆಯಂಡ ಸೋಮಣ್ಣ, ಸಿ.ಎಲ್.ಸೋಮೇಶ್, ಮೊಳೆರ ಮನೋಜ್ ಪೊನ್ನಣ್ಣ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕರಣ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು.