ಜಿಲ್ಲೆ

ವಿವಿಧ ಉದ್ದೇಶಕ್ಕೆ ನೇರ ಸಾಲ: ಜಿಲ್ಲಾ ಕೌಶಲಾಭಿವೃದ್ದಿ ಇಲಾಖೆಯಿಂದ ಅರ್ಜಿ ಆಹ್ವಾನ

ಮಂಡ್ಯ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬ್ರಾಹ್ಮಣ ಸಮುದಾಯದವರಿಗೆ ವಿವಿಧ ವಿಪ್ರ ನೇರ ಸಾಲ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ. ಆಸಕ್ತ ಬ್ರಾಹ್ಮಣ ಸಮುದಾಯದ ಅರ್ಹ ವಿಪ್ರರು ವಾಣಿಜ್ಯ/ಸ್ವಯಂ ಉದ್ಯೋಗದ ಉದ್ದೇಶಕ್ಕಾಗಿ ನೇರ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.