ಮಂಡ್ಯ: ವಿವಿಧ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ನ.16ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಭರತ್ ಫೈನಾನ್ಸ್ ಇನ್‌ಕ್ಯೂಷನ್‌ನಲ್ಲಿ ಖಾಲಿ ಇರುವ ಎರಡು ಐ.ಟಿ ಅಸೋಸಿಯೇಟ್ ಹುದ್ದೆಗೆ ಡಿಪ್ಲೊಮೋ ಆ್ಯಂಡ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ 18 ರಿಂದ 22 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 16 ಸಾವಿರ ರೂ ವೇತನದ ಜತೆಗೆ ಮೆಡಿಕಲ್ ಹಾಗೂ ಟಿ.ಎ ಸೌಲಭ್ಯವಿರಲಿದೆ. ಆಟೋಕ್ರಾೃಟ್ ಇಂಜಿನಿಯರ್ಸ್ ಸಂಸ್ಥೆಯಲ್ಲಿ 20 ಸಿಎನ್‌ಸಿ ಟರ್ನಿಂಗ್ ಮಿಷಿನ್ ಆಪರೇಟರ್ ಹುದ್ದೆ ಖಾಲಿ ಇವೆ. ಮಾಸಿಕ 15 ಸಾವಿರ ರೂ ವೇತನದ ಜತೆಗೆ ಇಎಸ್‌ಐ ಹಾಗೂ ಪಿಎಫ್ ಸೌಲಭ್ಯವಿದೆ. ಐ.ಟಿ.ಐ, ಡಿಪ್ಲೊಮೋ ವ್ಯಾಸಂಗ ಮಾಡಿರುವ 18 ರಿಂದ 32 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಐ.ಐ.ಎಫ್.ಎಲ್ ಸಮಸ್ತ ಮೈಕ್ರೋ ಫೈನಾನ್ಸ್‌ನಲ್ಲಿ 14 ಬ್ರಾೃಂಚ್ ಡೆವಲಪ್‌ಮೆಂಟ್ ಆಫೀಸರ್ಸ್(ಪುರುಷ ಅಭ್ಯರ್ಥಿ ಮಾತ್ರ) ಹುದ್ದೆಗೆ 18 ರಿಂದ 30 ವರ್ಷದೊಳಗಿನ ಪಿಯುಸಿ, ಯಾವುದೇ ಪದವಿ, ಐ.ಟಿ.ಐ ಹಾಗೂ ಡಿಪ್ಲೊಮೋ ವ್ಯಾಸಂಗ ಮಾಡಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ 15 ಸಾವಿರ ರೂ ಜತೆಗೆ ಪೆಟ್ರೋಲ್, ಇನ್ಸೆಂಟಿವ್ಸ್, ವಿಮೆ ಸಿಗಲಿದೆ. ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್‌ನಲ್ಲಿ 70 ಫೀಲ್ಡ್ ಆಫೀಸರ್ಸ್ ಹುದ್ದೆಗೆ ಪಿಯುಸಿ, ಐ.ಟಿ.ಐ, ಡಿಪ್ಲೊಮೋ ಹಾಗೂ ಯಾವುದೇ ಪದವಿ ಹೊಂದಿರುವ 18 ರಿಂದ 28 ವರ್ಷದೊಳಗಿನವವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕ 14,570 ರೂ ವೇತನ ಹಾಗೂ ಪೆಟ್ರೋಲ್, ಇನ್ಸೆಂಟಿವ್ಸ್, ವಿಮೆ ಸೌಲಭ್ಯ ಸಿಗಲಿದೆ. ಆಸಕ್ತರು ಸ್ವವಿವರದೊಂದಿಗೆ ಬೆಳಗ್ಗೆ 10ಗಂಟೆಗೆ ನಗರದ ಆರ್‌ಟಿಒ ಕಚೇರಿ ಎದುರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಪ್ರಕಟಣೆ ತಿಳಿಸಿದೆ.