ಮಂಡ್ಯ: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾ.15ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.
ರಾಜ್ ಬಯೋ ಆರ್ಗ್ಯಾನಿಕ್, ಬಿ.ಝಡ್ ಫೈನಾನ್ಸ್, ಎರಿಯಂಟ್ ಇಂಡಿಯಾ, ದ್ವಾರಕ ಗ್ರಾಮೀಣ ಫೈನಾನ್ಸಿಯಲ್ ಸರ್ವಿಸಸ್ ಸಹಭಾಗಿತ್ವದಲ್ಲಿ ಆಯೋಜಿಸಿರುವ ಸಂದರ್ಶನಕ್ಕೆ ಎಸ್‌ಎಸ್‌ಎಲ್ಸಿ, ಪಿಯುಸಿ, ಐಟಿಐ(ಯಾವುದೇ ಟ್ರೇಡ್) ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅಂದು ಬೆಳಗ್ಗೆ 10.30ಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232- 295124 ಅಥವಾ ಮೊ.ಸಂ 9164642684 ಯನ್ನು ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.