ಜಿಲ್ಲೆ

ಡಿಪ್ಲೊಮಾ ಪ್ರವೇಶ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Belagavi

ಬೆಳಗಾವಿ: ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಸರ್ಕಾರಿ ಕೋಟಾದಡಿ ಡಿಪ್ಲೊಮಾ ಪ್ರಥಮ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.16ರ ವರೆಗೆ ವಿಸ್ತರಣೆ ಮಾಡಲಾಗಿದೆ.

ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯೊಂದಿಗೆ ಮೀಸಲಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ, ಕಲ್ಯಾಣ-ಕರ್ನಾಟಕ ಪ್ರಮಾಣಪತ್ರ ಸಲ್ಲಿಸಬೇಕು. ಸೀಟು ಹಂಚಿಕೆಯಾದ ನಂತರ ವಿದ್ಯಾರ್ಥಿ ತಾನು ಪ್ರವೇಶ ಪಡೆಯುವ ಪಾಲಿಟೆಕ್ನಿಕ್‌ನಲ್ಲೇ ನಿಗಪಡಿಸಿರುವ ಪ್ರವೇಶ ಶುಲ್ಕದೊಂದಿಗೆ ಅರ್ಜಿ ನೋಂದಣಿ ಶುಲ್ಕ ಪಾವತಿಸಬೇಕು.

ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್, ಗೋಮಟೇಶ ಪಾಲಿಟೆಕ್ನಿಕ್, ಭರತೇಶ ಪಾಲಿಟೆಕ್ನಿಕ್, ಮರಾಠಾ ಮಂಡಳ ಪಾಲಿಟೆಕ್ನಿಕ್ ಹಾಗೂ ಅಥಣಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತೆರೆಯಲಾಗಿರುವ ದಾಖಲೆ ಪರಿಶೀಲನಾ ಕೇಂದ್ರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.