ಮಡಿಕೇರಿ:
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಮ್ಮ ಭಾಷಣದಲ್ಲಿ ದೇಶದಲ್ಲಿ ಕಾಫಿಯ ಭವಿಷ್ಯದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಕಾಫಿ ನಮ್ಮ ಬದುಕು. ನಮ್ಮದಲ್ಲದ ವೃತ್ತಿ ಪ್ರೀತಿಸುವ ದಿನಗಳಲ್ಲಿ ಕಾಫಿ ದಸರಾ ರೀತಿಯ ಕಾರ್ಯಕ್ರಮ ವೃತ್ತಿ ಜತೆಗಿನ ನಂಟು ಹೆಚ್ಚಿಸುತ್ತದೆ. ಈಗ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಹೆಚ್ಚಾಗಿದೆ. ಆದರೆ ಇದರಲ್ಲಿ ಗೊಂದಲ ಕೂಡ ಕಂಡು ಬರುತ್ತಿದೆ. ಕಾಫಿ ಬೆಲೆ ಏರುಪೇರು ಇದ್ದರೆ ಅದನ್ನು ಸರಿಪಡಿಸಲು ಕಾಫಿ ಮಂಡಳಿಯಿAದ ಕ್ರಮ ತೆಗೆದುಕೊಳ್ಳಲಾಗುವುದು.
ಕಾಫಿಗೆ ಉತ್ತಮ ಮಾರುಕಟ್ಟೆ ಇದೆ. ಕಾಫಿ ಉದ್ಯಮಕ್ಕೆ ಯುವಜನರು ಬರುತ್ತಿದ್ದಾರೆ. ತಂತ್ರಜ್ಞಾನದ ಬೆಳವಣಿಗೆ ಆಗುತ್ತಿದೆ. ಅರೋಗ್ಯಕರ ಲಾಭವೂ ಇದೆ.
ಇವನ್ನೆಲ್ಲ ಒಂದುಗೂಡಿಸಲು ಇದ್ದ ವೇದಿಕೆಯೊಂದರ ಅಗತ್ಯವನ್ನು ಕಾಫಿ ದಸರಾ ಪೂರೈಸಿದೆ. ಕಾಫಿ ಬೆಳೆಗಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಈ ವರ್ಷದಿಂದ ಜಾರಿಗೆ ಬರುತ್ತಿರುವ ಯೂರೋಪಿಯನ್ ಯೂನಿಯನ್ ಡಿಫಾರೆಸ್ಟೆçÃಷನ್ ರೆಗ್ಯೂಲೇಷನ್ ದೇಶದ ಕಾಫಿ ಬೆಳೆಗಾರರ ಪಾಲಿಗೆ ದೊಡ್ಡ ಸವಾಲಾಗಿದೆ. ಕಾಫಿ ಬೆಳೆಯುವ ತೋಟಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಆಗದಂತೆ ಕಾಫಿ ಉತ್ಪಾದನೆ ನಡೆಯದಿದ್ದಲ್ಲಿ ಯೂರೋಪ್ ಮಾರುಕಟ್ಟೆಯಲ್ಲಿ ಭಾರತದ ಕಾಫಿ ತಿರಸ್ಕರಿಸಲಾಗುತ್ತದೆ. ಈ ಸವಾಲು ಎದುರಿಸಲು ಭಾರತೀಯ ಕಾಫಿ ಮಂಡಳಿ ಕೆಲಸ ಮಾಡುತ್ತಿದ್ದು, ಬೆಳೆಗಾರರಿಗೆ ಹೊರೆ ಆಗದ ರೀತಿಯಲ್ಲಿ ಪರಿಹಾರೋಪಾಯ ಕಂಡುಕೊಳ್ಳಲಾಗುವುದು.
ಹವಾಮಾನ ಸಮಸ್ಯೆಯೂ ಕಾಫಿಗೆ ಕಾಡುತ್ತಿದೆ. ಅಡಿಕೆ, ಕಾಳುಮೆಣಸು ಬೆಳೆಗಳಿಗೆ ವಿಮೆ ಇದೆ. ಆದರೆ ಕಾಫಿಗೆ ವಿಮೆ ಇಲ್ಲ. ಪ್ರೀಮಿಯಂ ಕೊಡಲು ಕೇಂದ್ರ ಸರ್ಕಾರ ತಯಾರಿದೆ, ಬೆಳೆಗಾರರೂ ಸಿದ್ಧರಿದ್ದಾರೆ. ರಾಜ್ಯ ಸರ್ಕಾರ ತನ್ನ ವಂತಿಗೆ ಕೊಟ್ಟರೆ ಕಾಫಿಗೆ ವಿಮೆ ಮಾಡುವುದು ಕಷ್ಟವೇನಲ್ಲ.
2047ಕ್ಕೆ ಭಾರತದಲ್ಲಿ 7 ಲಕ್ಷ ಟನ್ ಕಾಫಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದರ ಮಾರುಕಟ್ಟೆಗೂ ಕಾರ್ಯಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಮೂಲಕ ಕಾಫಿಗೆ ಉತ್ತಮ ಮಾರುಕಟ್ಟೆ ಸಾಧ್ಯವಿದ್ದು, ಈ ನಿಟ್ಟಿನಲ್ಲೂ ಕೆಲಸ ನಡೆದಿದೆ. ಹೊಸ ಯೋಜನೆಗಳನ್ನು ಇಟ್ಟುಕೊಂಡು ಕಾಫಿ ಮಂಡಳಿ ಕೆಲಸ ಮಾಡುತ್ತಿದೆ. ಕಾಫಿಯಲ್ಲಿ ಮಿಶ್ರಬೆಳೆ ಪರಿಚಯಿಸಬೇಕು. ಕಾಫಿಗೆ ಸಂಬAಧಿಸಿದ 100 ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಯ ಗುರಿ ಇಟ್ಟುಕೊಳ್ಳಲಾಗಿದ್ದು, ಕೊಡಗು ವಿಶ್ವವಿದ್ಯಾಲಯ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಿದೆ ಎಂದು ಹೇಳಿದರು.