ಅಂಕೋಲಾ: ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ) ಅಂಕೋಲಾ, ಗ್ರಾಪಂ ಅಲಗೇರಿ ಮತ್ತು ಸ್ಥಳೀಯ ಶ್ರೀ ಸಣ್ಣಮ್ಮ ದೇವಿ ತರುಣ ಮಿತ್ರ ಮಂಡಳಿ, ದಿನಕರ ಗ್ರಂಥಾಲಯ ಬಳಗ, ಹೋ ಹೋ ಚೋ ಸಾಂಸ್ಕೃತಿಕ ವೇದಿಕೆ ಮತ್ತು ಸಮಸ್ತ ನಾಗರಿಕರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಜನ್ಮ ದಿನಾಚರಣೆ ಕಾರ್ಯಕ್ರಮವು ಅಲಗೇರಿಯ ಶ್ರೀ ಹೊಲೆವಟರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಟ್ಟಡದಲ್ಲಿ ಸೆ. 10ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮೋಹನ ಹಬ್ಬು ಅಧ್ಯಕ್ಷತೆ ವಹಿಸುವರು. ಅಲಗೇರಿ ಗ್ರಾಪಂ.ಅಧ್ಯಕ್ಷ ಸಂತೋಷ ಜಿ. ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ದಿನಕರ ದೇಸಾಯಿ ಕುಟುಂಬ ಸದಸ್ಯರಾದ ವಿನಯ ದಯಾನಂದ ದೇಸಾಯಿ ಅವರು ದಿನಕರ ದೇಸಾಯಿ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಪಿ.ಎಂ. ಪಪೂ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಉಪನ್ಯಾಸ ನೀಡಲಿದ್ದಾರೆ. ಗೌರವ ಉಪಸ್ಥಿತರಾಗಿ ದಿನಕರ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಷ್ಣು ನಾಯ್ಕ, ಉಪಾಧ್ಯಕ್ಷ ಶಾಂತಾರಾಮ ನಾಯಕ ಹಿಚಕಡ, ಡಾ.ಆರ್.ಜಿ. ಗುಂದಿ, ಶ್ರೀ ಸಣ್ಣಮ್ಮ ದೇವಿ ತರುಣ ಮಿತ್ರ ಮಂಡಳಿಯ ಅಧ್ಯಕ್ಷ ದಿನಕರ ಬೀರಪ್ಪ ನಾಯ್ಕ ಆಗಮಿಸಲಿದ್ದಾರೆ ಎಂದು ದಿನಕರ ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ಜಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.