ಹೊಳೆಹೊನ್ನೂರು: ಕಂದಾಯ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿಯ ಅಗತ್ಯವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿನ ನಾಡಕಚೇರಿಗೆ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಅಽಕಾರಿಗಳು, ಸಿಬ್ಬಂದಿ ಜತೆ ಸಭೆ ನಡೆಸಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ದಾಖಲೆ ಪುಸ್ತಕಗಳ ಸೂಕ್ತ ನಿರ್ವಹಣೆ ಅತಿ ಮುಖ್ಯ. ಇದರಿಂದ ತಾಲೂಕು ಹಾಗೂ ನಾಡ ಕಚೇರಿಗೆ ಬರುವ ಜನರಿಗೆ ಶೀಘ್ರ ದಾಖಲೆ ನೀಡಲು ಅನುಕೂಲವಾಗುತ್ತದೆ ಎಂದು ಸೂಚಿಸಿದರು.
ಕಚೇರಿಗಳಲ್ಲಿ ನಾಗರಿಕರಿಗೆ ಸಕಾಲದಲ್ಲಿ ಪಡೆದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಅನವಶ್ಯಕವಾಗಿ ಜನರನ್ನು ಅಲೆದಾಡಿಸಬೇಡಿ. ಆದಷ್ಟು ಗ್ರಾಮ ಲೆಕ್ಕಽಕಾರಿಗಳು ತಮ್ಮ ವೃತ್ತದಲ್ಲಿ ಬರುವ ಗ್ರಾಮಸ್ಥರಿಗೆ ಸ್ಥಳದಲ್ಲೇ ಕೆಲಸ ಮಾಡಿಕೊಡಬೇಕು. ಇಲಾಖೆ ನೌಕರರು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ತಕರಾರು ಅರ್ಜಿಗಳನ್ನು ಕಡೆಗಣಿಸದೆ ನ್ಯಾಯ ಸಮ್ಮತವಾಗಿ ಪರಿಶೀಲನೆ ನಡೆಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತಂದು ಕಾರ್ಯಕ್ಷಮತೆ ಹೆಚ್ಚಿಸಲು ಚಿಂತನೆ ನಡೆಸಲಾಗುವುದು. ಹಳೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಆಡಳಿತದಲ್ಲಿ ಇನ್ನಷ್ಟು ಸುಧಾರಣೆ ತರಲು ಪ್ರಯತ್ನಿಸಲಾಗುತ್ತದೆ. ಸ್ಥಳೀಯ ನಾಡ ಕಚೇರಿಯ ಆಡಳಿತ ವೈಖರಿ ಹಾಗೂ ಕಡತ ವಿಲೇವಾರಿ ಬಗ್ಗೆ ದಾಖಲೆ ಪರಿಶೀಲಿಸಿದ ಸಚಿವರು ನಾಡ ಕಚೇರಿಯ ನೂತನ ಕಟ್ಟಡದ ಬಗ್ಗೆ ಗಮನ ಹರಿಸುವಂತೆ ಅಽಕಾರಿಗಳಿಗೆ ಸೂಚಿಸಿದರು.
ಜಿ¯್ಲÁಽಕಾರಿ ಎಸ್.ಸೆಲ್ವಮಣಿ ಸಚಿವರಿಗೆ ಸಮಜಾಯಿಷಿ ನೀಡಿ, ಪ್ರತಿ ತಿಂಗಳ ಆಯ್ದ ಶನಿವಾರದಂದು ಇಲಾಖೆಗೆ ಸಂಬAಧಪಟ್ಟ ಅಽಕಾರಿಗಳು ಹಾಗೂ ನೌಕರರಿಗೆ ಜಿ¯್ಲÁ ಕೇಂದ್ರದಲ್ಲಿ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಇಲಾಖೆಯಲ್ಲಿ ಆಗುವ ಬದಲಾವಣೆ, ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ನವೀಕರಣಗೊಳ್ಳಲು ಸಹಾಯವಾಗುತ್ತದೆ. ಹಳೇಯ ದಾಖಲೆಗಳನ್ನು ಸ್ಕಾ÷್ಯನ್ ಮಾಡಿ ಡಿಜಿಟಲೀಕರಣ ಮಾಡಿದಾಗ ಜನರಿಗೆ ತಕ್ಷಣ ದಾಖಲೆ ನೀಡಿಲು ಸಹಕಾರಿಯಾಗುತ್ತದೆ ಎಂದರು.
ಎಡಿಸಿ ಸಿದ್ದಲಿಂಗರೆಡ್ಡಿ, ಉಪವಿಭಾಗಾಽಕಾರಿ ಸತ್ಯನಾರಾಯಣ, ತಹಸೀಲ್ದಾರ್ ಕೆ.ಆರ್.ನಾಗರಾಜ್, ಉಪತಹಸೀಲ್ದಾರ್ ನಾಗರಾಜ್, ರಾಜಸ್ವ ನಿರೀಕ್ಷಕ ಬಿ.ಎಂ.ಮಾನೋಜಿರಾವ್, ನಾಗಶ್ರೀ, ಕಲ್ಯಾಣಿ ಬಸವರಾಜ್, ಸಿ.ವಿಜಯಕುಮಾರ್, ರವಿ ಕುಮಾರ್ ಇತರರಿದ್ದರು.