ಜಿಲ್ಲೆ

ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ

ವಿವೇಕಾನಂದ ದಾಸನಕೊಪ್ಪ

ಕುಂದಗೋಳ: ಗ್ರಾಮ ಗ್ರಂಥಾಲಯಗಳ ಡಿಜಿಟಲ್ ಸಖಿಯರಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಹಾಗೂ ಡೆಲ್ ಸಹಯೋಗದಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ಡಿಜಿ ವಿಕಸನ ಮತ್ತು ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ ನಡೆಯಿತು.

ತಾಪಂ ಸಹಾಯಕ ನಿರ್ದೇಶಕ ಶರಣಬಸಪ್ಪ ಎಚ್. ಅವರು ತರಬೇತಿಗೆ ಚಾಲನೆ ನೀಡಿ, ಡಿಜಿ ಸಖಿಯರು ಶನಿವಾರ ಮತ್ತು ಭಾನುವಾರ ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಮುಂದಿನ ಹಂತದಲ್ಲಿ ಪ್ರತಿದಿನವೂ ಡಿಜಿಟಲ್ ಗ್ರಂಥಾಲಯಗಳು ಜ್ಞಾನಾರ್ಜನೆಯ ಕೇಂದ್ರಗಳಾಗಲಿವೆ. ಸಂಶಿ ಗ್ರಾಮದ ಗ್ರಂಥಾಲಯವು ಮಾದರಿಯಾಗಿ ಮಾರ್ಪಟ್ಟಿದೆ ಎಂದರು.

ಶಿಕ್ಷಣ ಫೌಂಡೇಷನ್‌ನ ಯಲ್ಲಪ್ಪ ಸಾಳುಂಕೆ ತರಬೇತಿ ನೀಡಿದರು. ಪರಪ್ಪ ಕೆ., ಹರ್ಷವರ್ಧನ ಹಾದಿಮನಿ ಮತ್ತು ಈಶ್ವರ ಬರಿಗಾಲ ಉಪಸ್ಥಿತರಿದ್ದರು. 17 ಗ್ರಾಮ ಗ್ರಂಥಾಲಯಗಳ ಡಿಜಿಟಲ್ ಸಖಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.