ವಿಜಯವಾಣಿ ಸುದ್ದಿಜಾಲ ಧಾರವಾಡ
ಡಿಜಿಟಲ್ ನಾವೀನ್ಯತೆ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಐಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹಾದೇವ ಪ್ರಸನ್ನ ಹೇಳಿದರು.
ನಗರದ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿರ‍್ಸ್ ಸಭಾಂಗಣದಲ್ಲಿ ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನಾಚರಣೆ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಆವಿಷ್ಕಾರಗಳು ಸುಸ್ಥಿರ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ದೀರ್ಘಕಾಲಿನ ಹಸಿರು ಮತ್ತು ಸಾವಯುವ ರೀತಿ ಪರಿಸರ ಬೆಂಬಲಿಸಬೇಕು ಎಂದ ಅವರು, ಎಲೆಕ್ಟಾçನಿಕ್ ಉಪರಣಗಳ ಉತ್ಪಾದನೆ, ಬಳಕೆ, ಮರುಬಳಕೆ ಮಾಡುವುದು ಪರಿಸರ ಸ್ನೇಹಿ ಆಗಬೇಕಿದೆ. ಡಿಜಿಟಲ್ ರೂಪಾಂತರ ಕ್ರಿಯೆಯಲ್ಲಿ ನಾವು ಸಮರ್ಥನೀಯ ರೀತಿ ವ್ಯವಹಾರ ಮಾಡುತ್ತಿದ್ದೇವೆಯೇ ಎಂಬುದನ್ನು ನಾವೆಲ್ಲ ಯೋಚಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿರ‍್ಸ್ ಅಧ್ಯಕ್ಷ ಡಾ. ವೀರಣ್ಣ ಹವಾಲ್ದಾರ ಮಾತನಾಡಿ, ಮುಂದಿನ ದಿನಗಳಲ್ಲಿ ಸುಸ್ಥಿರತಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆವಿಷ್ಕಾರದಿಂದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದರು.
ಡಾ. ಕೆ.ಎನ್. ಪಾಟೀಲ, ಇತರರು ಇದ್ದರು. ಡಾ.ಎಸ್.ಎಸ್. ಕೆರೂರ ಸ್ವಾಗತಿಸಿದರು. ಶ್ರೀಹರಿ ಕೆ. ಎಚ್. ವಂದಿಸಿದರು.