ಜಿಲ್ಲೆ

ದಿಗಿಲ್ ಸಿನಿಮಾದ ಚಿತ್ರೀಕರಣ ಮುಕ್ತಾಯ

Mangaluru - Hariprasad Rai



ಮಂಗಳೂರು : ಚೇತನ್ ಮುಂಡಾಡಿ ನಿರ್ದೇಶನದ ದಿಗಿಲ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ನಡೆಯುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್ ಮುಂಡಾಡಿ ಅವರು ತುಳುನಾಡಿನಲ್ಲಿ ಆರಾಧಿಸುವ ಜುಮಾದಿ ಬಂಟ ದೈವದ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ.
ದಿಗಿಲ್ ಮೂಲಕ ಸತ್ಯ ಘಟನೆಯ ಕಥೆ ಹೇಳಲು ಹೊರಟಿದ್ದೇವೆ. ಇದು ಈ ಮಣ್ಣಿನ ಕಥೆ. ಜುಮಾದಿ ಬಂಟ ದೈವ ಮತ್ತು ಮಂಗಳಮುಖಿಯ ನಡುವಿನ ಕಥಾನಕವಾಗಿದೆ. ದಿಗಿಲ್ ಅಂದರೆ ಭಯ ಎಂದು ಅರ್ಥ. ಚಿತ್ರವು ತುಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬರುತ್ತಿದೆ ಎಂದು ಚೇತನ್ ಮುಂಡಾಡಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಯ ಬೆಳ್ತಂಗಡಿ, ಬಳಂಜ, ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಜನವರಿ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ. ರಾಮ್ ಮೂವೀಸ್ ಮತ್ತು ಎಂಆರ್‌ಪಿ ಎಂಟರ್ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಮೈಸೂರು ರಮೇಶ್ ಮತ್ತು ರವಿಶಂಕರ್ ಪೈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೇತನ್ ರೈ ಮಾಣಿ, ಶೋಭಾ ಶೆಟ್ಟಿ, ಅಗ್ನಿಸಾಕ್ಷಿ ಖ್ಯಾತಿ ಅಮಿತ್ ರಾವ್, ರಮೇಶ್ ರೈ ಕುಕ್ಕುವಳ್ಳಿ, ಪುಷ್ಪರಾಜ್ , ರೂಪಾ.ಡಿ ಶೆಟ್ಟಿ, ಸರೋಜಿನಿ ಶೆಟ್ಟಿ, ಬಾಬಾ ಪ್ರಸಾದ್, ಅರಸ ಕುತ್ಯಾರ್, ನಾಗರಾಜ್ ರಾವ್ ವರ್ಕಾಡಿ, ಎಂ. ಕೆ ಮಠ, ನಾರಾಯಣ ಶಬರಾಯ, ಅನಿಷ್ ಪೂಜಾರಿ ವೇಣೂರು, ಎಚ್. ಕೆ. ನಯನಾಡ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಮಣಿಕಾಂತ್ ಕದ್ರಿ ಸಂಗೀತ, ಪದ್ಮನಾಭನ್ ಮಣಿ ಕ್ಯಾಮರಾ ಹಾಗೂ , ಕೀರ್ತರಾಜ್ ಡಿ ಸಂಕಲನವಿದೆ ಎಂದು ಪ್ರಕಟಣೆ ತಿಳಿಸಿದೆ.


..............