ರೋಟರಿ ಕ್ಲಬ್ ಮಿಡ್‌ಟೌನ್ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರೋಟರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ದಿಗಣ ಕುಂದ ನೆಲೆಯಲಿ ಕಲೆಯ ಅಲೆ ಕಾರ್ಯಕ್ರಮವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.  
ಜಿಲ್ಲೆ

ಸಂಘಟನೆಗಳ ಸೇವೆಯಿಂದ ವ್ಯಕ್ತಿತ್ವ ವಿಕಸನ

ಇಂದಿರಾ ಎನ್ ಕೆ

ಕುಂದಾಪುರ: ಅಂತಾರಾಷ್ಟ್ರೀಯ ಸಂಘಟನೆ ಆದರೂ ಸ್ಥಳೀಯವಾಗಿ ಸಮಸ್ಯೆಗಳಿಗೆ ಸ್ಪಂದಿಸಿ, ಕ್ರೀಡೆ, ಸಾಂಸ್ಕೃತಿಕ, ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ರೋಟರಿ, ಲಯನ್ಸ್, ಜೆಸಿಐ, ರೆಡ್‌ಕ್ರಾಸ್‌ನಂತಹ ಸಂಸ್ಥೆಯವರದು ಸೇವೆ ಎನಿಸುತ್ತದೆ. ಇಂತಹ ಸಂಘಟನೆಗಳ ಮೂಲಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು, ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದು ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಕುಂದಾಪುರದ ಈಸ್ಟ್ ವೆಸ್ಟ್ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರೋಟರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ‘ದಿಗಣ ಕುಂದ ನೆಲೆಯಲಿ ಕಲೆಯ ಅಲೆ’ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರದ ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಶೇಖರ್ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ದೇವ್ ಆನಂದ್, ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಕೆ.ಪಾಲಾಕ್ಷ, ಜಿಲ್ಲಾ ಗವರ್ನರ್ ಆಗಿ ನಾಮಿನಿಯಾದ ಬಿ.ಎಂ.ಭಟ್, ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಜಿಲ್ಲಾ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ವೈ., ಉಪಾಧ್ಯಕ್ಷ ಧಮೇರ್ಂದ್ರ ಸಿಂಗ್, ಜೋನಲ್ ಲೆಫ್ಟಿನೆಂಟ್ ಮಹೇಂದ್ರ ಶೆಟ್ಟಿ, ಜೋನಲ್ ಲೆಫ್ಟಿನೆಂಟ್ ವೆಂಕಟೇಶ್ ನಾವುಂದ, ಪ್ರದೀಪ್ ಡಿ.ಕೆ., ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷ ಕುಂದಾಪುರದ ಲಿಯಾಖತ್ ಅಲಿ, ಕುಂದಾಪುರ ದಕ್ಷಿಣದ ಜುಡಿತ್ ಮೆಂಡೋನ್ಸಾ, ಕುಂದಾಪುರ ಸನ್‌ರೈಸ್‌ನ ಪ್ರಶಾಂತ ಹವಾಲ್ದಾರ್, ಗಂಗೊಳ್ಳಿಯ ಚಂದ್ರಕಲಾ ತಾಂಡೇಲ, ಸಿದ್ದಾಪುರದ ಸುಹಾಸ್ ಚಾತ್ರ, ಬೈಂದೂರಿನ ಮೋಹನ್ ರೇವಣ್ಕರ್, ಮಿಡ್‌ಟೌನ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸಂಯೋಜಕ ಶಶಿಧರ ಶೆಟ್ಟಿ, ಕಾರ್ಯಕ್ರಮ ಕಾರ್ಯದರ್ಶಿ ನಳಿನ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ರವಿಶಂಕರ್ ಕೆ. ಸ್ವಾಗತಿಸಿದರು. ರಂಜಿತ್ ಕುಮಾರ್ ಶೆಟ್ಟಿ, ಸಚಿನ್‌ಕುಮಾರ್ ಶೆಟ್ಟಿ ನಿರ್ವಹಿಸಿದರು.