ಯಲ್ಲಾಪುರ: ಪಟ್ಟಣದ ರಾಮಾಪುರದಲ್ಲಿ ರಭಸದ ಮಳೆಯಿಂದಾಗಿ ರಸ್ತೆ ಕುಸಿದು ಹೋಗಿದ್ದು, ಶಾಲಾ ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗಿದೆ.
ಗದ್ದೆಗಳ ನಡುವೆ ಹಾದು ಹೋದ ಕಾಲುದಾರಿಗೆ ಕಾಂಕ್ರೀಟ್ ಹಾಕಿ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಮಳೆಯ ಅಬ್ಬರಕ್ಕೆ ಕಾಂಕ್ರೀಟ್ ಕುಸಿದು ಓಡಾಡಲು ಕಷ್ಟವಾಗಿದೆ.
ಪ್ರತಿನಿತ್ಯ ಈ ಭಾಗದ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆ, ಕಾಲೇಜ್ಗೆ ಹೋಗಬೇಕಾಗಿದೆ. ರಸ್ತೆಯ ದುಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದೆ. ಸ್ಥಳೀಯ ಆಡಳಿತ ಈ ಬಗೆಗೆ ತುರ್ತಾಗಿ ಗಮನ ಹರಿಸಿ, ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.