* ಆರ್‌ಆರ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಡ್ಡಾದಿಡ್ಡಿ ಮಳಿಗೆಗಳು
* ವಾಹನ ಸವಾರರು ಹೈರಾಣ
* ಪುರಸಭೆ ನಿರ್ಲಕ್ಷ್ಯ
ಎಂಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣದ ಪ್ರಮುಖ ಆರ್‌ಆರ್ ರಸ್ತೆಯಲ್ಲಿ ತಲೆ ಎತ್ತುತ್ತಿರುವ ಹಣ್ಣಿನ ಅಂಗಡಿಗಳಿಂದ ನಾಗರಿಕರಿಗೆ ಸಂಚರಿಸಲು ರಸ್ತೆಯೇ ಇಲ್ಲದಂತಾಗಿದೆ.
ಪಟ್ಟಣದ ಆರ್‌ಅರ್‌ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರವಾಹನ ನಿಲುಗಡೆ, ಹಣ್ಣು ಅಂಗಡಿಗಳಿಂದ ಕೆಂಪೇಗೌಡ ವೃತ್ತದಿಂದ ಶಿವಕುಮಾರ ಸ್ವಾಮೀಜಿ ವೃತ್ತದವರೆಗೆ ಸಾರ್ವಜನಿರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಉಂಟಾಗಿದೆ. ರಸ್ತೆ ಬದಿಯಲ್ಲಿನ ಅಂಗಡಿ-ಮುಂಗಟ್ಟುಗಳ ಮಾಲೀಕರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಹಾಗೂ ದಿನಸಿ ಅಂಗಡಿ, ವೈನ್ಸ್‌ಸ್ಟೋರ್ ಇತರ ಅಂಗಡಿಗಳಿಗೆ ಬರುವ ದಾಸ್ತಾನುಗಳ ಲಾರಿ ನಿಲ್ಲುವುದರಿಂದ ರಸ್ತೆ ತುಂಬ ವಾಹನಗಳು ತುಂಬಿ ಜನಸಾಮಾನ್ಯರಿಗೆ ತಿರುಗಾಡಲು ತೊಂದರೆಯಾಗಿದೆ.
ಆರ್‌ಆರ್‌ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಳದಿಂದಾಗಿ ನಾಗರಿಕರ ಅನುಕೂಲಕ್ಕಾಗಿ ಸುಮಾರು 3 ವರ್ಷಗಳ ಹಿಂದೆ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ ಏಕಮುಖ ಸಂಚಾರಗೊಳಿಸಿ ಅನುಕೂಲ ಕಲ್ಪಿಸಲಾಯಿತು. ಆದರೆ, ಇತ್ತೀಚೆಗೆ ಏಕಮುಖ ಸಂಚಾರ ಪಾಲನೆ ಮಾಡದ ಕಾರಣ ಎರಡು ಕಡೆಗಳಿಂದ ವಾಹನ ಸಂಚಾರದಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಪುರಸಭೆ ಹಳೆಯ ಅಂಗಡಿಗಳನ್ನು ತೆರವುಗೊಳಿಸಿದ್ದು, ಆ ಜಾಗದ ಬಳಿ ಹಣ್ಣು ಅಂಗಡಿಗಳನ್ನು ಸ್ಥಳಾಂತರಿಸಿದರೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ಅನುಕೂಲವಾಗುತ್ತದೆ. ಆದರೆ, ಪುರಸಭೆ ಈ ಬಗ್ಗೆ ಯಾವುದೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯಿಸಿರುವುದರಿಂದ ಕಿರಿಕಿರಿ ಉಂಟಾಗಿದೆ ಎಂಬುದು ಪಾದಚಾರಿಗಳ ಆರೋಪವಾಗಿದೆ.
ಸಂಜೆಯಾಗುತ್ತಿದಂತೆ ಅಂಗಡಿ-ಮುಂಗಟ್ಟುಗಳ ಕಸವನ್ನು ರಸ್ತೆಗೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ಹೆಜ್ಜೆ ಇಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ – ಪುರಸಭೆ ಸಭೆ ನಡೆಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸಮಸ್ಯೆಗೆ ಮುಕ್ತಿ ನೀಡಿದರೆ ಇಲಾಖೆಗಳಿಗೂ ಉತ್ತಮ ಹೆಸರು ಬರಲು ಸಾಧ್ಯ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
ಪಟ್ಟಣಕ್ಕೆ ಆರ್‌ಆರ್‌ರಸ್ತೆ ಪ್ರಮುಖವಾಗಿದೆ. ಈ ರಸ್ತೆಯಲ್ಲಿ ತಿರುಗಾಡುವುದೇ ಯಮಯಾತನೆಯಾಗಿದೆ. ಸಮಸ್ಯೆ ಸರಿಪಡಿಸಲು ಚುನಾಯಿತ ಪ್ರತಿನಿಧಿಗಳಿಗೆ ಆಸಕ್ತಿ ಇಲ್ಲದಂತಾಗಿದ್ದು, ರಾತ್ರಿ ವೇಳೆ ಈ ರಸ್ತೆಯನ್ನು ನೆನಪಿಸಿಕೊಳ್ಳಲು ಭಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಜನತೆ ಜೀವನ ನಡೆಸುವಂತಾಗಿದೆ. ದೀಪು, ಸ್ಥಳೀಯತಾತ್ಕಾಲಿಕವಾಗಿ ಹಣ್ಣು ಅಂಗಡಿಗಳನ್ನು ಹಿಂಬದಿಗೆ ಸ್ಥಳಾಂತರಿಸಿ ಏಕಮುಖ ಮುಖ ಸಂಚಾರಗೊಳಿಸಲು ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಪುರಸ‘ೆಗೆ ಮನವಿ ಮಾಡಿದರೂ ಕ್ರಮಕೈಗೊಂಡಿಲ್ಲ. ಈ ವಿಚಾರವಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಗಮನಕ್ಕೆ ತಂದು ಇಲಾಖೆ ಅಧಿಕಾರಿಗಳ ಸ‘ೆನಡೆಸಿ ನಾಗರಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಅನಿಲ್ ಕುಮಾರ್ , ಸ್ಥಳೀಯ ಪುರಸ‘ಾ ಸದಸ್ಯ