ಜಿಲ್ಲೆ

ನವದುರ್ಗೆಯರ ಆರಾಧನೆಯಿಂದ ಕಷ್ಟ ದೂರ

ವಿವೇಕಾನಂದ ದಾಸನಕೊಪ್ಪ

ಗುತ್ತಲ: ನವದುರ್ಗೆಯರ ಆರಾಧನೆಯಿಂದ ಕಷ್ಟ-ಕಾರ್ಪಣ್ಯ ದೂರಾಗಿ ಸುಖ ಸಮೃದ್ಧಿ ದೊರೆಯುವುದು ಎಂದು ಅಗಡಿ ಆನಂದವನದ ಶ್ರೀಗುರುದತ್ತ ಚಕ್ರವರ್ತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಎಲೆ ಪೇಟೆಯಲ್ಲಿ ಬುಧವಾರ ಆಯೋಜಿಸಿದ್ದ ದಸರಾ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರವನ್ನವರಾತ್ರಿಯಲ್ಲಿ ದೇವಿ ಅಂದರೆ ಶಕ್ತಿಯ ಆರಾಧನೆಗೆ ಪ್ರಾಮುಖ್ಯತೆ ಇದೆ. ಗುತ್ತಲದಲ್ಲಿ ಕಳೆದ 21 ವರ್ಷಗಳಿಂದ ನಿರಂತರವಾಗಿ ದಸರಾ ಹಬ್ಬ ಆಚರಣೆ ಮಾಡುತ್ತಾ ಬಂದಿದೆ. ಧರ್ಮದ ಸಾರವನ್ನು ಜನರಿಗೆ ತಿಳಿಸುವ ಮಹತ್ವದ ಕಾರ್ಯವನ್ನು ಸಮಿತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪಪಂ ಅಧ್ಯಕ್ಷ ಮಾಳವ್ವ ಗೊರವರ ಕಾರ್ಯಕ್ರಮ ಉದ್ಘಾಟಿಸಿದರು. ದಸರಾ ಉತ್ಸವ ಸಮಿತಿ ಅಧ್ಯಕ್ಷ ಚನ್ನಪ್ಪ ಕಲಾಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಚಂದ್ರ ಕಲಾಲ, ಮುಖ್ಯ ಶಿಕ್ಷಕ ವಿರೇಶ ಗಡ್ಡದ್ದೇವರಮಠ, ಪಪಂ ಸದಸ್ಯೆಯರಾದ ದೀಪಾ ಭರಡಿ, ಸಾವಿತ್ರಿ ಘಂಟಿ, ನಾಗರತ್ನ ಬಡಿಗೇರ, ಶಕುಂತಲಾ ಗುತ್ತಲ, ಶೈಲಾ ಶ್ಯಾಡಂಬಿ, ದಸರಾ ಉತ್ಸವ ಸಮಿತಿ ಸದಸ್ಯರು, ಪಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಯುವಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಗಾಯತ್ರಿ ಮಹಿಳಾ ಮಂಡಳದ ಸದಸ್ಯೆಯರು ಪ್ರಾರ್ಥಿಸಿದರು. ಸೋಮಶೇಖರ ತಿಪ್ಪಿಗುಂಡಿ ಸ್ವಾಗತಿಸಿದರು. ಪ್ರದೀಪ ಸಾಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಕೋಡಬಾಳ ಕಾರ್ಯಕ್ರಮ ನಿರೂಪಿಸಿದರು. ವೀರಯ್ಯ ಪ್ರಸಾದಿಮಠ ವಂದಿಸಿದರು. ನಂತರ ಪೃಥ್ವಿ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.