ಬಾಗಲಕೋಟೆ ವಿದ್ಯಾಗಿರಿ ವಿಪ್ರ ಅಭಿವದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಲೋಕಕಲ್ಯಾಣಾರ್ಥವಾಗಿ ಮಹಾಸುದರ್ಶನ ಹೋಮ ನೆರವೇರಿಸಲಾಯಿತು. ರಾಘವೇಂದ್ರಾಚಾರ್ಯ ಕಿರಸೂರ, ಅರವಿಂದಾಚಾರ್ಯ ಕಟ್ಟಿ, ಶ್ರೀಹರಿ ಪಾಟೀಲ, ಕೆ.ಬಿ.ದೇಸಾಯಿ ಇತರರಿದ್ದರು. 
ಜಿಲ್ಲೆ

ದುರ್ಗೆ ಆರಾಧನೆಯಿಂದ ಕಷ್ಟ ದೂರ

Vijayapura - Desk - Gurappa Lokuri

ಬಾಗಲಕೋಟೆ: ಮಹಾಸುದರ್ಶನ ಹೋಮದಿಂದ ಅಜ್ಞಾನ, ಕಷ್ಟಗಳು ನಾಶವಾಗಿ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ವಿದ್ವಾನ್ ರಾಘವೇಂದ್ರಾಚಾರ್ಯ ಕಿರಸೂರ ಹೇಳಿದರು.

ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕ ಮಾಸ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಭಾನುವಾರ ಹಮ್ಮಿಕೊಂಡಿದ್ದ ನವಗ್ರಹ ಸಹಿತ ಮಹಾಸುದರ್ಶನ ಸಾಮೂಹಿಕ ಹೋಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಸುದರ್ಶನಕ್ಕೆ ದುರ್ಗೆ ಅಭಿಮಾನಿ ದೇವತೆ. ದುರ್ಗೆಯನ್ನು ಶಕ್ತಿ ದೇವತೆಯಾಗಿ ಪೂಜಿಸುತ್ತೇವೆ. ದುರ್ಗೆಯ ಆರಾಧನೆಯಿಂದ ಕಷ್ಟಗಳು ಕಳೆಯುತ್ತವೆ. ಎಲ್ಲ ದಿಕ್ಕುಗಳಿಂದ ಬರುವ ಆಪತ್ತು ಪರಿಹಾರವಾಗಿ ಯಶಸ್ಸು ಲಭಿಸುತ್ತದೆ. ಅಧಿಕ ಮಾಸದಲ್ಲಿ ಹಮ್ಮಿಕೊಳ್ಳುವ ಎಲ್ಲ ಧಾರ್ಮಿಕ ಕಾರ್ಯಗಳಿಗೂ ಹೆಚ್ಚು ಲ ಲಭಿಸುತ್ತದೆ. ನಾಡಿನ ಹಿತಕ್ಕಾಗಿ ಪ್ರಾರ್ಥಿಸಿ ಇಂದು ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಮಹಾಸುದರ್ಶನ ಹೋಮ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಬೆಳಗ್ಗೆ 9.30 ಗಂಟೆಯಿಂದ ಪ್ರಾರ್ಥನೆಯೊಂದಿಗೆ ಹೋಮ ಆರಂಭಿಸಲಾಯಿತು. 12.30ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಅರ್ಚಕ ಅರವಿಂದಾಚಾರ್ಯ ಕಟ್ಟಿ ಲ ಪಂಚಾಮತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಿದ್ದರು. ಮಧ್ಯಾಹ್ನ ಮಹಾನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಯಿತು. ಶ್ರೀಹರಿ ಪಾಟೀಲ, ಎನ್.ಬಿ.ಆಲೂರ, ಕೆ.ಬಿ.ದೇಸಾಯಿ, ದಯಾನಂದ ಕುಲಕರ್ಣಿ, ಜಿ.ವಿ.ಜೋಶಿ, ಪಿ.ವಿ.ಜಾಲಿಹಾಳ, ಪ್ರವೀಣ ಗುಮಾಸ್ತೆ, ಹೃಷಿಕೇಶ ಗುಡಿ, ಪ್ರಸನ್ನ ಜೇರೆ, ವಿನಾಯಕ ಬೋಕರೆ, ಪ್ರಶಾಂತ ದೇಶಪಾಂಡೆ, ಶ್ರೀನಿಧಿ ಪುರೋಹಿತ ಇತರರಿದ್ದರು. 35ಕ್ಕೂ ಹೆಚ್ಚು ದಂಪತಿಗಳು ಹೋಮದಲ್ಲಿ ಭಾಗವಹಿಸಿದ್ದರು.