ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಕಿರಣ ಬಿಜಾಪುರ ಅವರಿಗೆ ಪುಷ್ಪ ಗುಚ್ಚ ನೀಡಿ ಗೌರವಿಸಲಾಯಿತು. ಪವಿತ್ರಾ ಸಮಾಜೆ, ಶಿವಪ್ರಸಾದ ಕೆ.ಎಸ್. ಇತರರಿದ್ದರು. 
ಜಿಲ್ಲೆ

ವಿಭಿನ್ನ ಮಾಹಿತಿ ನೀಡಿದ ವಿಶೇಷ ಉಪನ್ಯಾಸ

ಶಂಕರ ಗೆಜ್ಜಿ

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಿಂದ ಕಾಲೇಜಿನ ಸರ್. ಸಿ.ವಿ.ರಾಮನ್ ಸಭಾಂಗಣದಲ್ಲಿ ‘ನ್ಯಾನೋ ತಂತ್ರಜ್ಞಾನ: ಸುಸ್ಥಿರತೆ ಮತ್ತು ನಾವೀನ್ಯತೆ ಕಡೆಗೆ ರಸಾಯನಶಾಸ್ತ್ರದ ಮಾರ್ಗ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು.

ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಮಾಜಿ ವಿದ್ಯಾರ್ಥಿ, ಕ್ರೈಸ್ಟ್ ವಿವಿ ಸಂಶೋಧನಾರ್ಥಿ ಕಿರಣ ಬಿಜಾಪುರ ಮಾತನಾಡಿ, ನ್ಯಾನೋ ತಂತ್ರಜ್ಞಾನವು ಉಪಸೂಕ್ಷ್ಮದರ್ಶಕ ಮಟ್ಟದಲ್ಲಿ ಅನ್ವಯಗಳಿಗೆ ವಸ್ತುಗಳನ್ನು ಉತ್ಪಾದಿಸಲು ಪ್ರತ್ಯೇಕ ಪರಮಾಣುಗಳು ಮತ್ತು ಅಣುಗಳನ್ನು ಕುಶಲತೆಯಿಂದ ಹೇಗೆ ನಿರ್ವಹಿಸುತ್ತದೆ ಎಂದು ವಿವರಿಸಿದರು.

ಪ್ರಾಚಾರ್ಯೆ ಡಾ. ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ರಸಾಯನಶಾಸ್ತ್ರ ಸಂಘದ ಅಧ್ಯಕ್ಷ ಪವಿತ್ರಾ ಸಮಾಜೆ ಸ್ವಾಗತಿಸಿದರು. ಅಮಿಶಾ ಬಡೊದೆಕರ, ವಿಜಯಶ್ರೀ ನಿರೂಪಿಸಿದರು. ಶಿವಪ್ರಸಾದ ಕೆ.ಎಸ್. ಅವರು ವಂದಿಸಿದರು.