ಜಿಲ್ಲೆ

ದ್ಧಾಭಕ್ತಿಯ ನಾಗರಪಂಚಮಿ ಆಚರಣೆ

Chamarajanagar

ಚಾಮರಾಜನಗರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಹುತ್ತಗಳಿಗೆ ಹಾಲೆರೆಯುವ ಮೂಲಕ ನಾಗರಪಂಚಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ತಾಲೂಕಿನ ವೆಂಕಟಯ್ಯನಛತ್ರ, ವಿ.ಸಿ.ಹೊಸೂರು, ಹರದನಹಳ್ಳಿ, ಅಂಕನಶೆಟ್ಟಿಪುರ, ಅಟ್ಟುಗೂಳಿಪುರ, ಅಮಚವಾಡಿ, ಹೊನ್ನಹಳ್ಳಿ, ಬಿಸಲವಾಡಿ, ಅರಕಲವಾಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು.

ಮಂಗಳವಾರ ಆಚರಿಸಬೇಕಿದ್ದ ನಾಗರಪಂಚಮಿಯನ್ನು ಕೆಲವರು ಬುಧವಾರ ಹಾಗೂ ಗುರುವಾರಗಳಂದು ಆಚರಣೆ ಮಾಡುವುದು ಉಂಟು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸಮೀಪದ ಹುತ್ತಗಳಿಗೆ ಕುಟುಂಬ ಸಮೇತರಾಗಿ ತೆರಳಿದ ಜನರು ಹುತ್ತಕ್ಕೆ ಹಾಲನ್ನೆರೆದರು. ಅಲ್ಲದೆ ಹುತ್ತವನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಅರಿಶಿಣ, ಕುಂಕುಮ ಹಚ್ಚಿ ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಿದರು.

ನಾಗರಪಂಚಮಿ ಹಿನ್ನೆಲೆಯಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಅಲ್ಲದೆ, ಗ್ರಾಮಗಳಲ್ಲಿಯೇ ಇದ್ದ ನಾಗರ ಕಲ್ಲುಗಳಿಗೂ ಪೂಜೆ ಸಲ್ಲಿಸಿದರು.