ಜಿಲ್ಲೆ

ಬ್ರಾಹ್ಮಣ ವಧು-ವರ ಸಮಾವೇಶ 25ರಿಂದ

Kopala - Raveendra V K

ಕೊಪ್ಪಳ: ನಗರದ ಶ್ರೀ ರಾವೇಂದ್ರ ಸ್ವಾಮಿ ಮಠದಲ್ಲಿ ಜ.25 ಮತ್ತು 26ರಂದು ಬ್ರಾಹ್ಮಣ ವಧು&ವರರ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಪದಿ ೌಂಡೇಶನ್​ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಾರದ್ವಾಜ್​ ತಿಳಿಸಿದರು.

ಟ್ರಸ್ಟ್​ನಿಂದ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ. ಈವರೆಗೆ 57 ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಜೋಡಿಗಳಿಗೆ ಮದುವೆ ಮಾಡಿಸಿದ್ದೇವೆ. ಬ್ರಾಹ್ಮಣ ಮಹಾಸಭಾ, ಸಪ್ತಪದಿ ೌಂಡೇಶನ್​ ಹಾಗೂ ಮಂಗಳಸೂತ್ರ ೌಂಡೇಶನ್​ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿರಲಿದೆ. ಮೊದಲು ದಿನ ಪೂರ್ತಿ ವಧು&ವರರ ಸಮಾವೇಶ ಇರಲಿದೆ. ಎರಡನೇ ದಿನ ಮಧ್ಯಾಹ್ನ 3 ಗಂಟೆವರೆಗೆ ಸಮಾವೇಶ ಮುಂದುವರೆಯಲಿದೆ. ಬಳಿಕ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ವೇದಿಕೆ ಕಾರ್ಯಕ್ರಮ ಜರುಗುವುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಾವು ಯಾವುದೇ ಶುಲ್ಕ ಪಡೆಯುತ್ತಿಲ್ಲ. ಇದೊಂದು ಸೇವೆಯಾಗಿ ಮಾಡಿಕೊಂಡು ಬಂದಿದ್ದೇವೆ. ನಾವೆಲ್ಲ ಉದ್ಯೋಗಸ್ಥರಾಗಿದ್ದು, ಬಿಡುವಿಣ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ವಧು&ವರ ಕಡೆಯವರಿಗೆ ಸಂಪರ್ಕ ಏರ್ಪಡಿಸುವ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಹೊರತಾಗಿ ಹೆಚ್ಚುವರಿ ನಮ್ಮ ಪಾತ್ರ ಇರುವುದಿಲ್ಲ. ಪರಸ್ಪರ ಒಪ್ಪಿಗೆಯಾಗಿ ಮದುವೆ ನಿಶ್ಚಯವಾದಲ್ಲಿ ನಮ್ಮ ಸಮಾವೇಶ ಉದ್ದೇಶ ಈಡೇರಲಿದೆ. ಆಸಕ್ತರು ಶ್ರೀನಿವಾಸ ಭಾರದ್ವಾಜ್​ 9449425536, 8217876335 ಸಂಖ್ಯೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದೆಂದು ಹೇಳಿದರು.

ಪ್ರಮುಖರಾದ ಹನುಮಂತರಾವ್​ ದೇಶಪಾಂಡೆ, ವೇಣುಗೋಪಾಲ ಜಹಗೀರದಾರ, ರಾವೇಂದ್ರ ನರಗುಂದ, ಡಿ.ವಿ.ಜೋಶಿ ಇತರರಿದ್ದರು.