ವಿಜಯವಾಣಿ ಸುದ್ದಿಜಾಲ ಸುಳ್ಯ
ರಕ್ತದಾನದಂತಹ ಶ್ರೇಷ್ಠ ದಾನದಲ್ಲಿ ತೊಡಗಿಕೊಂಡರೆ ಜೀವದಾನ ಮಾಡಿದ ಪುಣ್ಯ ದೊರೆತಂತಾಗುತ್ತದೆ ಎಂದು ಐವರ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಹೇಳಿದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಪಂ ಐವರ್ನಾಡು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ವಾಹನ ಚಾಲಕ-ಮಾಲೀಕರ ಸಂಘ ಐವರ್ನಾಡು, ವರ್ತಕ ಸಂಘ ಐವರ್ನಾಡು ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ, ಮಧುಮೇಹ ತಪಾಸಣೆ, ಹೃದಯ ಸ್ತಂಭನದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿ.ಪಿ.ಆರ್. ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್‌ನ ಡಾ.ದಿನೇಶ್, ರೋಟರಿ ಸಹಾಯಕ ಗವರ್ನರ್ ವಿನಯ್ ಕುಮಾರ್, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ರಮ್ಯ, ಗ್ರಾಪಂ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್, ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ, ಅಧ್ಯಕ್ಷ ನವೀನ್ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ, ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ಕಟ್ಟತ್ತಾರು, ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಜಬಳೆ, ಕಾರ್ಯದರ್ಶಿ ಅನಿಲ್ ಕುತ್ಯಾಡಿ, ಬಳಗ ಬಾಂಜಿಕೋಡಿ ಅಧ್ಯಕ್ಷ ಮಹಾಬಲ ಗುಂಪಕಲ್ಲು ಸಂಘದ ಅಧ್ಯಕ್ಷ ನಿಖಿಲ್ ಮಡ್ತಿಲ ಉಪಸ್ಥಿತರಿದ್ದರು.