ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಕ್ರೀಡಾ ಸಂಘದ ಅಧ್ಯಕ್ಷ ಶರಣ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಧನಂಜಯ ಮೇಧೂರ, ಬಿ.ಪ್ರಕಾಶ್ ಇತರರಿದ್ದರು.  
ಜಿಲ್ಲೆ

ಕ್ರೀಡಾ ಲೋಕದ ತಾರೆ ಧ್ಯಾನ ಚಂದ್

ನ್.ಆರ್.ಪುರ: ಹಾಕಿಪಟು ಧ್ಯಾನ ಚಂದ್ ಸಿಂಗ್ 3 ಬಾರಿ ಒಲಿಂಪಿಕ್‌ನಲ್ಲಿ ಸ್ಪರ್ಧಿಸಿ ಭಾರತಕ್ಕೆ 3 ಚಿನ್ನದ ಪದಕ ಗಳಿಸಿಕೊಟ್ಟಿದ್ದರು ಎಂದು ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಬಿ.ಪ್ರಕಾಶ್ ತಿಳಿಸಿದರು.

ಗುರುವಾರ ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮೇಜರ್ ಧ್ಯಾನ ಚಂದ್ ಸಿಂಗ್ ಉತ್ತರ ಪ್ರದೇಶ ರಾಜ್ಯದವರು. 1926 ರಿಂದ 1948ರವರೆಗೆ 185 ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಅವರು ಕ್ರೀಡಾ ಲೋಕದ ತಾರೆ ಎಂದು ಬಣ್ಣಿಸಿದರು. ಶಾಲೆಯ ಕ್ರೀಡಾ ಸಂಘದ ಅಧ್ಯಕ್ಷ ಶರಣ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಮುಖ್ಯಶಿಕ್ಷಕ ಧನಂಜಯ ಮೇಧೂರ, ಶಿಕ್ಷಕರು ಇದ್ದರು.