ಜಿಲ್ಲೆ

ತಜ್ಞರಿಂದ ತನಿಖೆಗೆ ಆರೋಗ್ಯ ಸಚಿವ ಸೂಚನೆ - ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ಪ್ರಕರಣ

Mangaluru - Nishantha Narayana

ಪುತ್ತೂರು: ಶಸಚಿಕಿತ್ಸೆ ವೇಳೆ ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಬಿಟ್ಟ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಆರೋಗ್ಯಾಽಕಾರಿ ನೇತೃತ್ವದಲ್ಲಿ ತಜ್ಞರ ತಂಡದ ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯಾಽಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರನ್ನೊಳಗೊಂಡ ತಂಡ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಘಟನೆಯ ಸಮಗ್ರ ಮಾಹಿತಿ ಪಡೆದಿದೆ. ಅಗತ್ಯ ದಾಖಲೆ ಪತ್ರ ಸಂಗ್ರಹಿಸಿದೆ. ಕೃತ್ಯ ಎಸಗಿದ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಪಡೆದಿದೆ.

ಪ್ರಕರಣದ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ. ಘಟನೆ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ಕೇಳಿದ್ದು, ಅವರು ನೀಡುವ ವರದಿ ಆಧರಿಸಿ ಪ್ರಕರಣ ದಾಖಲಾಗಲಿದೆ ಎಂದು ಪುತ್ತೂರು ಉಪಅಽಕ್ಷಕ ಅರುಣ್ ನಾಗೇಗೌಡ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೇಲ್ನೋಟಕ್ಕೆ ಘಟನೆಯಲ್ಲಿ ಸತ್ಯಾಂಶ ಇರುವಂತೆ ಕಾಣುತ್ತಿದ್ದು, ತಜ್ಞರ ತಂಡದ ವರದಿಯನ್ನು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದೆ. ಪೊಲೀಸ್ ಇಲಾಖೆಗೆ ವರದಿಯ ಅಗತ್ಯವಿದ್ದರೆ ನೀಡಲಾಗುವುದು.

| ಡಾ.ಎಚ್.ಆರ್.ತಿಮ್ಮಯ್ಯ, ಜಿಲ್ಲಾ ಆರೋಗ್ಯಾಽಕಾರಿ, ದ.ಕ.