ಸಂಡೂರು ತಾಲೂಕು ಹೊಸ ದರೋಜಿ ಗ್ರಾಮದಲ್ಲಿ ಆಯುಷ್ಮಾನ್ ಭವ ಆರೋಗ್ಯ ಮೇಳ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ರಕ್ತದಾನ ಮಾಡಲಾಯಿತು. ವೈದ್ಯಾಧಿಕಾರಿ ಡಾ.ಪಣೀಂಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎಮ್.ಎಮ್.ಯುನ ಡಾ.ಸುನೀಲ್, ಗ್ರಾಪಂ ಸದಸ್ಯ ಮಾಯಣ್ಣ, ದಲಿತ ಸಮಿತಿ ಜೋಗ ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಇತರರಿದ್ದರು. 
ಜಿಲ್ಲೆ

ಆರೋಗ್ಯ ಸೇವೆ ನೀಡಲು ಬದ್ಧ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಆಯುಷ್ಮಾನ್ ಭವ ಆಂದೋಲನವನ್ನು ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಡಿಎಚ್‌ಒ ಡಾ.ವೈ ರಮೇಶ್‌ಬಾಬು ಹೇಳಿದರು.

ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಶಿಬಿರ ಆಯೋಜನೆ

ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಆಯುಷ್ಮಾನ್ ಭವ ಆರೋಗ್ಯ ಮೇಳ ಅಂಗವಾಗಿ ಅಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಉಚಿತ ರಕ್ತದಾನ ಶಿಬಿರ ಹಾಗೂ ಅಂಗಾಂಗ ದಾನ ನೋಂದಣಿ ಶಿಬಿರ ಶುಕ್ರವಾರ ಮಾತನಾಡಿದರು.
ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕ್ಷಯರೋಗ, ಎಚ್.ಐ.ವಿ ಮತ್ತು ಕುಷ್ಠರೋಗಗಳನ್ನು ಪತ್ತೆ ಹಚ್ಚಲು ಶಿಬಿರ ಸಹಕಾರಿಯಾಗಿದೆ. ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವಿಠಲಾಪುರ ದೂರವಿದ್ದರೂ ತೋರಣಗಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆಯನ್ನು ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ವಿಠಲಾಪುರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಹರೀಶ್ ಮಾತನಾಡಿ, ಶಿಬಿರದಲ್ಲಿ 35 ಜನರು ರಕ್ತದಾನ ಮಾಡಿದ್ದಾರೆ. ಅಲ್ಲದೆ 32 ಜನರು ಅಂಗಾಂಗ ದಾನ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ಗ್ರಾಪಂ ಸದಸ್ಯರಾದ ಮಾಯಣ್ಣ, ದಲಿತ ಸಮಿತಿ ಜೋಗ ಗ್ರಾಮ ಘಟಕದ ಅಧ್ಯಕ್ಷ ನಾಗರಾಜ, ನಾರಾಯಣಪ್ಪ, ಮುಖಂಡರಾದ ಅಂಬಣ್ಣ, ನಾರಾಯಣ, ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಣೀಂಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎಮ್.ಎಮ್.ಯುನ ಡಾ.ಸುನೀಲ್, ಮುಖ್ಯ ಶಿಕ್ಷಕಿ ಗೀತಾ, ಅಮರೇಶ್, ಆರೋಗ್ಯ ಸಿಬ್ಬಂದಿ ಇಸ್ಮಾಯಿಲ್, ಎರ‌್ರಿಸ್ವಾಮಿ, ಲೋಕಿನಾಯ್ಕ ಇನ್ನಿತರರಿದ್ದರು.