ಹಳಿಯಾಳ: ಭಾರತದ ಏಕತೆಯ ರಕ್ಷಣೆಯಲ್ಲಿ ದಿವಂಗತ ಶ್ಯಾಮಾಪ್ರಸಾದ ಮುಖರ್ಜಿ ಅವರ ಪಾತ್ರ ಅಮೂಲ್ಯವಾದದ್ದು. ಬಂಗಾಳ ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಉಳಿಸುವ ಹೋರಾಟದಲ್ಲಿ ಅವರು ಮಾಡಿದ ಅತ್ಯುನ್ನತ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ಕೃತಜ್ಞನಾಗಿರಬೇಕು ಎಂದು ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ಅಖಂಡ ಭಾರತದ ಏಕತೆಗೆ ಶ್ರಮಿಸಿದ ಧೀಮಂತ ನಾಯಕ ಜನಸಂಘವನ್ನು ಕಟ್ಟಿ, ಜಮ್ಮು-ಕಾಶ್ಮೀರದಲ್ಲಿನ ಹಿಂದುಗಳಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕರು. ಅವರು ಸದಾ ಸ್ಮರಣೀಯ ಎಂದರು.
ಪಕ್ಷದ ಹಳಿಯಾಳ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಮುಖರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಶಾಂತಾ ಹಿರೇಕರ, ಯಲ್ಲಪ್ಪ ಹೊನ್ನೋಜಿ, ಯಲ್ಲಪ್ಪ ಹೆಳವರ, ಪಾಂಡು ಪಾಟೀಲ, ಉಮೇಶ ದೇಶಪಾಂಡೆ, ಜಯಲಕ್ಷ್ಮೀ ಚವ್ಹಾಣ, ಇತರರಿದ್ದರು.