ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ. ವೈ.ಎಂ. ಜಯರಾಜ, ಎಸ್.ಆರ್. ಜಯಶಂಕರ, ಜಿ.ಆರ್.ಕುಲಕರ್ಣಿ ಮತ್ತಿತರರಿದ್ದಾರೆ. 
ಜಿಲ್ಲೆ

ವಿಮರ್ಶೆ ಕ್ಷೇತ್ರ ವಿಸ್ತಾರಗೊಳಿಸಿದ ಧೀಮಂತ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಕವಿಯ ಹಿನ್ನೆಲೆ ಮತ್ತು ಸಾಹಿತ್ಯದ ವಸ್ತು ನಿಷ್ಠತೆಯ ಅಂಶಗಳು ಸಾಹಿತಿಯನ್ನು ಮೇಲೆತ್ತರಕ್ಕೆ ಒಯ್ಯಲು ಸಾಧ್ಯ ಎಂದು ಬಿಎಲ್‌ಡಿಇ ಸಂಸ್ಥೆಯ ಡೀಮ್ಡ್ ವಿವಿ ಸಮಕುಲಪತಿ ಪ್ರೊ. ವೈ.ಎಂ. ಜಯರಾಜ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರ, ಧಾರವಾಡದ ಡಾ. ಆಮೂರ ಅವರ ಶತಮಾನೋತ್ಸವ ಸಮಿತಿ ಹಾಗೂ ಧಾರವಾಡ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಆಮೂರ ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ವಿಷಯದಲ್ಲಿ ಪ್ರಭುತ್ವ ಸಾಧಿಸಿದವರು. ಬೇಂದ್ರೆಯವರ ಸಾಹಿತ್ಯವನ್ನು ವಿಮರ್ಶೆಗೆ ಒಳಪಡಿಸಿ ವಿಮರ್ಶೆ ಕ್ಷೇತ್ರದ ಕ್ಷಿತಿಜವನ್ನು ವಿಸ್ತಾರಗೊಳಿಸಿದ ಶ್ರೇಯಸ್ಸು ಆಮೂರ ಅವರಿಗೆ ಸಲ್ಲುತ್ತದೆ ಎಂದರು.

ಮುಖ್ಯ ಅತಿಥಿ ಬೆಂಗಳೂರಿನ ಖ್ಯಾತ ವಿಮರ್ಶಕ ಪ್ರೊ. ಎಸ್.ಆರ್. ಜಯಶಂಕರ ಮಾತನಾಡಿ, ಡಾ. ಆಮೂರ ಅವರು ಆಳವಾದ ಅಧ್ಯಯನಶೀಲರು, ಹೃದಯ ಶ್ರೀಮಂತಿಕೆಯುಳ್ಳವರು, ವಿಚಾರ ಮತ್ತು ಚಿಂತನಶೀಲರು. 20-21ನೇ ಶತಮಾನದ ಹೊಸಗನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಅಭ್ಯಸಿಸಿದ್ದರು. ಅವರ ನವೀರಾದ ವಿಮರ್ಶೆಯು ಸಾಹಿತಿಗಳನ್ನು ಮತ್ತಷ್ಟು ಚೆನ್ನಾಗಿ ಬರೆಯುವಂತೆ ಮಾಡಿರುವ ಅವರ ಬದುಕು ಮತ್ತು ಬರಹ ನಿಜವಾಗಲೂ ಆದರ್ಶ ಪ್ರಾಯ ಎಂದು ತಿಳಿಸಿದರು.

ಉಪನ್ಯಾಸಕರಾದ ಜಿ.ಆರ್. ಕುಲಕರ್ಣಿ, ಬಿ.ವಿ. ಕುಲಕರ್ಣಿ ಮತ್ತು ಅರವಿಂದ ಕಂಚ್ಯಾಣಿ ಡಾ. ಆಮೂರ ಅವರ ಒಡನಾಟ ಮತ್ತು ಸಾಹಿತ್ಯದ ಅನುಭವದ ವಿಚಾರದ ಕುರಿತು ಹಂಚಿಕೊಂಡರು. ವಿಶ್ರಾಂತ ಪ್ರಾಧ್ಯಾಪಕ ಎನ್.ಜಿ. ಕರೂರ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್.ಕೆ. ಕುಲಕರ್ಣಿ ಮಾತನಾಡಿದರು.

ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಸ್ವಾಗತಿಸಿದರು. ಡಾ. ಎಂ.ಎಸ್. ಮದಭಾವಿ ಪ್ರಸ್ತಾವನೆ ಮಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಡಾ. ವಿ.ಡಿ. ಐಹೊಳ್ಳಿ ವಂದಿಸಿದರು.

ಡಾ. ಆರ್.ವಿ. ಕೊಟ್ನಾಳ, ವಿ.ಸಿ. ನಾಗಠಾಣ, ಮ.ಗು. ಯಾದವಾಡ, ಜಂಬುನಾಥ ಕಂಚ್ಯಾಣಿ, ಶರಣಗೌಡ ಪಾಟೀಲ, ಡಾ. ವಿ.ಎಂ. ಬಾಗಾಯತ, ಎಸ್.ಬಿ. ದೊಡಮನಿ, ಡಾ. ಎಂ.ಎಸ್. ಚಾಂದಕವಟೆ, ಎಸ್.ಎನ್. ಶಿವಣಗಿ, ಸಂಗಮೇಶ ಬದಾಮಿ, ಡಾ. ಎಸ್.ಐ. ಮೇತ್ರಿ, ಶಕುಂತಲಾ ದೊಡಮನಿ, ಶಾರದಾ ಕೊಪ್ಪಾ, ದಾಕ್ಷಾಯಣಿ ಹುಡೇದ, ದಾಕ್ಷಾಯಣಿ ಬಿರಾದಾರ ಪಿ.ಎಸ್. ಕನಮಡಿ. ಜಿ.ಬಿ. ಸಾಲಕ್ಕಿ, ಬಿ.ಎನ್. ಹಿರೇಮಠ, ಬಿ.ಎಂ. ಪಾಟೀಲ, ಮಹಾದೇವ ಹಾಲಳ್ಳಿ, ಜಗದೀಶ ಗಲಗಲಿ, ಎಸ್.ಜಿ. ನಾಡಗೌಡರ, ಎಸ್.ಸಿ. ಸಂಗೊಂದಿಮಠ, ಎನ್.ಆರ್. ಕುಲಕರ್ಣಿ, ಚೇತನಾ ಸಂಕೊಂಡ, ಅಂಬಾದಾಸ ಜೋಶಿ, ಎಚ್.ಎಸ್. ಕಸಬೇಗೌಡರು ಮತ್ತಿತರರಿದ್ದರು.