ಮಡಿಕೇರಿ: ರೋಟರಿ ವಲಯ ೬ರ ಸಹಾಯಕ ಗವರ್ನರ್ ಆಗಿ ಪಾರುವಂಗಡ ಧಿಲನ್ ಚಂಗಪ್ಪ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲು ರೋಟರಿ ಕ್ಲಬ್ ಸದಸ್ಯರಾಗಿರುವ ಧಿಲನ್ ರೋಟರಿಯಲ್ಲಿ ೧೦ ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಪಾರುವಂಗಂಡ ಸನ್ನಿ ಮೊಣ್ಣಪ್ಪ ಮತ್ತು ಸರಸ್ವತಿ ದಂಪತಿ ಪುತ್ರರಾಗಿರುವ ಧಿಲನ್ ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ಕೂ ಕಾರ್ಯನಿರ್ವಹಿಸುತ್ತಿದ್ದು, ಗೋಣಿಕೊಪ್ಪ ದಸರಾ ಸಾಂಸ್ಕತಿಕ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಮೊದಲು ಬೆಂಗಳೂರು ಕೊಡವ ಸಮಾಜದ ನಿರ್ದೇಶಕರಾಗಿಯೂ ಧಿಲನ್ ಕಾರ್ಯನಿರ್ವಹಿಸಿದ್ದಾರೆ.
ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಲ್ಲಿ ಕೂಡ ಸೇವಾ ಅನುಭವ ಕೂಡ ಹೊಂದಿರುವ ಧಿಲನ್ ಪ್ರಸ್ತುತ ರೋಟರಿ ಅವಧಿಯಲ್ಲಿ ಗೋಣಿಕೊಪ್ಪ, ವಿರಾಜಪೇಟೆ, ರೋಟರಿ ಮಡಿಕೇರಿ, ರೋಟರಿ ಮಿಸ್ಟಿ ಹಿಲ್ಸ್ ಮತ್ತು ರೋಟರಿ ಮಡಿಕೇರಿ ವುಡ್ಸ್ ಕ್ಲಬ್‌ಗಳಿಗೆ ಸಹಾಯಕ ಗವರ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.