ಕರ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಢವಳಗಿ ಗ್ರಾಪಂ ಪಿಡಿಒ ಆನಂದ ಹಿರೇಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.ಗುಡಿಮನಿ, ಬಿಲ್​ ಕಲೆಕ್ಟರ್​ ಸಂಗಣ್ಣ ಪೂಜಾರಿ ಅವರನ್ನು ಜಿಪಂ ಸಿಇಒ ರಿಷಿ ಆನಂದ ಅವರನ್ನು ಸನ್ಮಾನಿಸಿದರು. ಜಿ.ಪಂ.ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಇದ್ದರು. 
ಜಿಲ್ಲೆ

ಕರ ವಸೂಲಿಯಲ್ಲಿ ಢವಳಗಿ ಗ್ರಾಪಂ ಸಾಧನೆ

ಗಿರೀಶ ಸಗರ

ಢವಳಗಿ: ಕರ ವಸೂಲಾತಿ ಆಂದೋಲನದಲ್ಲಿ ಢವಳಗಿ ಗ್ರಾಮ ಪಂಚಾಯಿತಿ 15.65 ಲಕ್ಷ ರೂ. ವಸೂಲಿ ಮಾಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಗ್ರಾಪಂ ಪಿಡಿಒ ಆನಂದ ಹೀರೆಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ. ಗುಡಿಮನಿ, ಸಿಬ್ಬಂದಿ ಶ್ರಮವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದಾರೆ. ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರಿಷಿ ಆನಂದ ಅವರು ಗ್ರಾಪಂ ಪಿಡಿಒ ಆನಂದ ಹಿರೇಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.ಗುಡಿಮನಿ, ಬಿಲ್​ ಕಲೆಕ್ಟರ್​ ಸಂಗಣ್ಣ ಪೂಜಾರಿ ಅವರನ್ನು ಸನ್ಮಾನಿಸಿದರು.

ಎಡಿಸಿ ಸೋಮಲಿಂಗ ಗೆಣ್ಣೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ. ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಸಹಾಯಕ ಕಾರ್ಯದರ್ಶಿ ಅನುಸೂಯಾ ಛಲವಾದಿ, ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ ಉಪಸ್ಥಿತರಿದ್ದರು.