ಢವಳಗಿ: ಸಮೀಪದ ರೂಢಗಿ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ 169ನೇ ಜಯಂತ್ಯುತ್ಸವ ಆಚರಿಸಲಾಯಿತು. ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಬ್ರಹ್ಮಶ್ರೀ ನಾರಾಯಣ ಗುರು ಅವರ ವೃತ್ತದಲ್ಲಿ ಪೂಜೆ ಸಲ್ಲಿಸಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯನವರ ಜಯಂತಿ ಆಚರಿಸಲಾಯಿತು.
ಸಮಾಜದ ಯುವ ಮುಖಂಡ ಈಶ್ವರ ಈಳಗೇರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬಸವರಾಜ ಬೆಲ್ಲದ, ಸದಸ್ಯ ಸದಾಶಿವ ಸೂಳಿಬಾವಿ, ಮತ್ತು ಈಡಿಗ, ಸಮಾಜದ ಮುಖಂಡರಾದ ಹುಲಗಪ್ಪ ಈಳಗೇರ, ಲಕ್ಷ್ಮಣ ಈಳಗೇರ, ಮುಕುಂದ ಈಳಗೇರ, ಪಾಂಡು ಈಳಗೇರ, ಬಸವರಾಜ ಈಳಗೇರ, ಸದಾಶಿವ ಕುಂದರಗಿ, ನಿಂಗು ಕೊಲಕಾರ, ಪ್ರಕಾಶ ಕುಂದರಗಿ, ಮುದಕಪ್ಪ ಕುಂದರಗಿ, ಯಮನೇಶ ಈಳಗೇರ ಇತರರಿದ್ದರು.