ಜಿಲ್ಲೆ

ಮಕ್ಕಳ ಅಕಾಡೆಮಿಯ ಕಾರ್ಯ ಶ್ಲಾಘನೀಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ 25 ವರ್ಷಗಳಿಂದ ರಚನಾತ್ಮಕ, ಸೂರ್ತಿದಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮಕ್ಕಳ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ನೇತ್ರತಜ್ಞ, ಪದ್ಮಶ್ರೀ ಡಾ. ಎಂ.ಎ0. ಜೋಶಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಧಾರವಾಡದ ಮಕ್ಕಳ ಅಕಾಡೆಮಿಯು ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ `ರಜತದೀಪ್ತಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಇಂಥ ಸಂಸ್ಥೆಗಳ ಮಾರ್ಗದರ್ಶನ, ಸಲಹೆ ಅಗತ್ಯ. ಆ ಕೊರತೆಯನ್ನು ಧಾರವಾಡದ ಮಕ್ಕಳ ಅಕಾಡೆಮಿಯು ಪರಿಪೂರ್ಣಗೊಳಿಸುತ್ತಿದೆ ಎಂದರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಧಾರವಾಡ ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳ ಸಮಗ್ರ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 25 ಸಾಧಕರಿಗೆ `ಬಾಲದೀಪ್ತಿ' ರಜತ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ಮಲಾ ಹೆಗಡೆ, ಸೋಮನಾಥ ಮಹಾಜನಶೆಟ್ಟರ, ಮಹಾಂತೇಶ ಬಳ್ಳಾರಿ, ವಿಠಲ ಮುರತಗುಡ್ಡೆ, ಮಹಾಲಕ್ಷಿ÷್ಮÃ ಚಕ್ಕಡಿ, ವೀಣಾ ಅಠವಲೆ, ಪ್ರಮೋದಾ ಉಪಾಧ್ಯೆ, ಬಸವರಾಜ ಶಿಗ್ಗಾಂವ, ಕೃಷ್ಣ ಉಡುಪಾ, ಮಲ್ಲಿಕಾರ್ಜುನಗೌಡ ಪಾಟೀಲ, ನಾಗೇಶ ಶಾನಭಾಗ, ಉಲ್ಲಾಸ ಕಣಬರ್ಗಿ, ಡಾ. ಸುಷ್ಮಾ ಶಂಕರ, ಶಂಕರ ಹಲಗತ್ತಿ, ದತ್ತಾತ್ರೇಯ ಗಾಂವಕರ, ಸುನೀಲ ಖೋತ, ಜಯಶ್ರೀ ಎಮ್ಮಿ, ಮಹೇಶ ಜಾಧವ, ಸಿಕಂದರ ದಂಡಿನ, ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ. ರಮೇಶ ನೆಗಳೂರ, ಡಾ. ಕುಮದಾ ತಾವರಗೇರಿ, ಉಮೇಶ ಬಡಿಗೇರ, ಸುನೀಲ ಪಾಟೀಲ, ಡಾ. ಡೇವಿಡ್ ಶಾಕೂರ ಅವರಿಗೆ `ಬಾಲದೀಪ್ತಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಕಾಡೆಮಿ ಉಪಾಧ್ಯಕ್ಷ ಸಿ.ಯು. ಬೆಳ್ಳಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋರೋಗ ತಜ್ಞ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಡಾ. ಆನಂದ ಪಾಡುರಂಗಿ, ಡಾ. ಎಸ್.ಎಂ. ಶಿವಪ್ರಸಾದ, ಡಾ. ಸಿ.ಗು. ಹಿರೇಮಠ, ವೆಂಕಮ್ಮ ಗಾಂವಕರ, ಅರವಿಂದ ದೇಶಮುಖ, ಶ್ರೀಕಾಂತ ದೊಡ್ಡವಾಡ, ಕವಿತಾ ದೇಶಪಾಂಡೆ, ಪಲ್ಲವಿ ದೇಶಪಾಂಡೆ, ಡಾ. ಬಾಳಪ್ಪ ಚಿನಗುಡಿ, ಮಂಜುಳಾ ಪುರಾಣಿಕ, ಮಂಜುನಾಥ ಹಿರೇಮಠ, ಭಾಗವಹಿದ್ದರು.

ಮಾಯಾ ರಾಮನ್ ನಿರೂಪಿಸಿದರು. ಸಂಯೋಜಕ ಸತೀಶ ಪರ್ವತೀಕರ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಎಂ.ವೈ. ಸಾವಂತ ವಂದಿಸಿದರು.