ಜಿಲ್ಲೆ

ಧಾರವಾಡ ಲೋಕಸಭೆಗೆ ಶೇ. 74 ಮತದಾನ

ಮಂಜುನಾಥ ಅಂಗಡಿ

ಧಾರವಾಡ: ಜಿಲ್ಲೆಯ ೭ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿದ್ದ ೧,೯೦೧ ಮತಗಟ್ಟೆಗಳಲ್ಲಿ ಶೇ. ೭೪ರಷ್ಟು ಮತದಾನವಾಗಿದೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತದಾನ ಪ್ರಮಾಣ ಹೆಚ್ಚಳಕ್ಕೆ ತಿಂಗಳುಗಟ್ಟಲೇ ಪ್ರಚಾರ ಕಾರ್ಯ ಕೈಗೊಂಡಿತ್ತು. ವಿವಿಧ ರೀತಿಯ ಮತದಾನ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಹೀಗಾಗಿ ಜಿಲ್ಲಾಡಳಿತ ಶೇ. ೮೦ಕ್ಕೂ ಹೆಚ್ಚು ಮತದಾನವಾಗುವ ನಿರೀಕ್ಷೆ ಹೊಂದಿತ್ತು. ಆದರೆ, ಬಿಸಿಲಿನ ಹೊಡೆತಕ್ಕೆ ಜನ ಮನೆ ಬಿಟ್ಟು ಹೊರಬೀಳಲು ಹಿಂದೇಟು ಹಾಕಿದ್ದು ಕಂಡುಬAತು.