ಜಿಲ್ಲೆ

ಧರ್ಮಸ್ಥಳ ಮೌನ ಪ್ರತಿಭಟನೆ

ಸೋಮಲಿಂಗ ತಳವಾರ

ಬೆಳಗಾವಿ: ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಬೆಳಗಾವಿ ನಗರದಲ್ಲಿ ಧರ್ಮಸ್ಥಳ ಹಿತರಣಾ ಸಮಿತಿ ನೇತೃತ್ವದಲ್ಲಿ ಹಿಂದು ಮುಖಂಡರು, ಬಿಜೆಪಿ ಶಾಸಕರು, ಕಾರ್ಯಕರ್ತರು ಮಳೆ ಲೆಕ್ಕಿಸದೆ ಮೌನ ಪ್ರತಿಭಟನೆ ನಡೆಸಿದರು.

ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸುರಿಯುವ ಮಳೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಧಾರಾಕಾರ ಮಳೆ ಲೆಕ್ಕಿಸದೆ ಕೊಡೆ ಹಿಡಿದುಕೊಂಡು, ರೇನ್​ಕೋಟ್​ ಧರಿಸಿ ಕಿಲೋರ್ಸ್ಕರ್​ ರಸ್ತೆ, ಶನಿವಾರಕೂಟ್​, ಕಾಕತಿವೇಸ್​, ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಧರ್ಮಸ್ಥಳ ಚಲೋ ಎಚ್ಚರಿಕೆ: ರಾಜ್ಯ ಕಾಂಗ್ರೆಸ್​ ಸರ್ಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಬೇರೆ ಧರ್ಮಗಳ ಅವಹೇಳನಕಾರಿ ಪೋಸ್ಟ್​ ಹಾಕಿದ್ದರೂ ವಿರುದಟಛಿ ಕ್ರಮ ವಹಿಸುತ್ತದೆ. ಆದರೆ, ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಪೋಸ್ಟ್​ ಹಾಕಿದ್ದರೂ ಮೌನವಾಗಿವುದು ಖಂಡನೀಯ. ಪಿತೂರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಧರ್ಮಸ್ಥಳ ಚಲೋ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ: ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸತ್ಯ ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲರೂ ಸತ್ಯ ಮತ್ತು ಧರ್ಮಸ್ಥಳದ ಪರವಾಗಿದ್ದು, ಡಾ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಿಲ್ಲುತ್ತೇವೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೆಗ್ಗಡೆ ವಿರುದಟಛಿ ಅಪಪ್ರಚಾರ ಮಾಡುತ್ತಿರುವುದು ಖಂಡನಿಯ. ಸರ್ಕಾರ ಷಡ್ಯಂತ್ರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂಡಲಗಾ ರುದ್ರಕೇಸರಿ ಮಠದ ಹರಿಗುರು ಮಹಾರಾಜರು, ಪಂಚಾರಿ ಸ್ವಾಮೀಜಿ, ಬಿಜೆಪಿ ರಾಜ್ಯ ಉಪಾಧ್ಯ ಅನಿಲ ಬೆನಕೆ ಮಾತನಾಡಿದರು.

ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಮೇಯರ್​ ಮಂಗೇಶ ಪವಾರ್​, ಉಪಮೇಯರ್​ ವಾಣಿ ಜೋಶಿ, ಮುರುಘೇಂದ್ರಗೌಡ ಪಾಟೀಲ, ಹಣಮಂತ ಕೊಂಗಾಲಿ ಇತರರಿದ್ದರು.

ಅಪಪ್ರಚಾರ ಸಹಿಸುವುದಿಲ್ಲ: ಧಾರ್ಮಿಕ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಧರ್ಮಸ್ಥಳ ವಿರುದಟಛಿ ಕುತಂತ್ರ ನಡೆಯುತ್ತಿರುವುದು ದೊಡ್ಡ ಅನ್ಯಾಯ. ದೇಶದ ಜನ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇದ್ದಾರೆ ಎಂದು ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು. ದೇಶದಲ್ಲಿ ರಾಜಕೀಯ ಹೆಚ್ಚಾಗಿ ನಡೆಯುತ್ತಿದೆ. ಆದರೆ, ಧರ್ಮದ ಜತೆ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲಿ ಮೊದಲು. ರಾಜಕೀಯಕ್ಕಾಗಿ ಧರ್ಮ ಕೆಡಿಸುವ ಕಾರ್ಯ ಸರ್ಕಾರ ಮಾಡಬಾರದು. ಧರ್ಮದ ವಿರುದಟಛಿ ಕುತಂತ್ರ ಮಾಡಿರುವವರು ದೇಶದಲ್ಲಿ ಯಾರು ಉಳಿದಿಲ್ಲ. ಸರ್ಕಾರ ಇಂತಹ ವಿಷಯಗಳಿಗೆ ಗಮನ ಹರಿಸಬೇಕು. ಧರ್ಮಸ್ಥಳ ವಿಷಯದಲ್ಲಿ ರ್ನಿಲಕ್ಷ, ಅಪಪ್ರಚಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷಗಳಿಗೂ ಅಧಿಕ ಇತಿಹಾಸವಿದೆ. ದೇಶ, ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದು, ಹಿಂದು ಧಾರ್ಮಿಕತೆಯ ಪ್ರತಿಕವಾಗಿದೆ. ಆದರೆ, ಕೆಲವರು ಷಡ್ಯಂತ್ರ ಮಾಡಿ ಅಪಪ್ರಚಾರ ನಡೆಸುತ್ತಿದ್ದಾರೆ. ಹಿಂದುಗಳು ಶಾಂತಿಪ್ರಿಯರು. ಈ ಪ್ರಕರಣದಲ್ಲಿ ಎಸ್​ಐಟಿ ಯಾವುದೇ ಪುರಾವೆ ಕಂಡುಕೊಂಡಿಲ್ಲ. ಎಲ್ಲ ಹಿಂದುಗಳು ಧರ್ಮ ರಸಲು ಒಗ್ಗಟ್ಟಾಗಿದ್ದಾರೆ.

ಮಹಾಂತೇಶ ಕವಟಗಿಮಠ ವಿಧಾನ ಪರಿಷತ್​ ಮಾಜಿ ಸದಸ್ಯ