ಜಿಲ್ಲೆ

ಧರ್ಮಸ್ಥಳ ಸಂಘದ ಕಾರ್ಯ ಅನನ್ಯ

ಪ್ರಶಾಂತ ಹೂಗಾರ

ರಾಯಬಾಗ: ಧರ್ಮಸ್ಥಳ ಸಂಘ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ ಹೇಳಿದರು.

ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ನಿರಾಶ್ರಿತರಾದ ಹನಿಾ ಮುಲ್ಲಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ವಾತ್ಸಲ್ಯ ಮನೆ ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು.

ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ, ಧರ್ಮಸ್ಥಳ ಸಂಘದಿಂದ ನಿರಾಶ್ರಿತರಿಗೆ ವಾತ್ಸಲ್ಯ ಮನೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹಣ, ಬಡವರಿಗೆ ಮಾಸಾಶನ, ಅಂಗವಿಕಲರಿಗೆ ವೀಲ್‌ಚೇರ್ ಸೇರಿ ಅನೇಕ ಸಾಮಾಜಿಕ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಗ್ರಾಪಂ ಸದಸ್ಯ ಧೂಳಗೌಡ ಪಾಟೀಲ, ತಾಲೂಕು ಯೋಜನಾಧಿಕಾರಿ ಸಚಿನ ಗೌಡ, ಜ್ಞಾನವಿಕಾಸ ಯೋಜನಾಧಿಕಾರಿ ಮಲ್ಲಿಕಾ, ವಲಯ ಮೇಲ್ವಿಚಾರಕಿ ಮಂಜುಳಾ ಚಂದ್ರಶೇಖರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ, ಅನಿಲ ಹಂಜೆ, ಅಜಿತ ಖೇಮಲಾಪುರೆ, ಪಿಡಿಒ ಎಸ್.ಎಸ್.ನ್ಯಾಮಗೌಡ ಇತರರಿದ್ದರು.