ಜಿಲ್ಲೆ

ಧರ್ಮಸ್ಥಳ ಯೋಜನೆ ಸಮಾಜಕ್ಕೆ ಮಾದರಿ

ಇಂದಿರಾ ಎನ್ ಕೆ

ಕೊಕ್ಕರ್ಣೆ: ವೀರೇಂದ್ರ ಹೆಗ್ಗಡೆ ಅವರು ನಮ್ಮ ಊರಿನ ಕೆರೆಯ ಹೂಳು ತೆಗೆಯಲು ಅವಕಾಶ ನೀಡಿದ್ದು ನಮ್ಮ ಗ್ರಾಮದ ರೈತರಿಗೆ ಪ್ರಯೋಜನವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಸಮಾಜಕ್ಕೆ ಮಾದರಿ ಎಂದು ಉದ್ಯಮಿ ಮಹೇಶ್ ಶೆಟ್ಟಿ ಹೇಳಿದರು.

ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಅನ್ವಯ ಬ್ರಹ್ಮಾವರ ತಾಲೂಕು ಮಂದಾರ್ತಿ ವಲಯದ ವಂಡಾರು ಮದಗ ಕೆರೆಯ ಹೂಳು ತೆಗೆಯುವ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ನಮಸ್ತೆ ಭಾರತ್ ಟ್ರಸ್ಟ್ ಸಂಸ್ಥೆ ಅಧ್ಯಕ್ಷ ಪ್ರಮೋದ್ ಶೆಟ್ಟಿ ಮಾತನಾಡಿದರು. ವಂಡಾರು ಮದಗ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ವಂಡಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಿಲ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಬಾಯಿ, ಸದಸ್ಯ ಅಮರ್ ಹೆಗಡೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಿರ್ಮಲಾ ಶೆಟ್ಟಿ, ಕೆರೆ ಸಮಿತಿ ಸದಸ್ಯರು, ಪ್ರಗತಿಬಂಧು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿಕೆ ಪ್ರಸ್ತಾವನೆಗೈದರು. ರಾಘವೇಂದ್ರ ನಿರೂಪಿಸಿದರು.