ಇಟಗಿ: ದುಶ್ಚಟಕ್ಕೆ ಅಂಟಿಕೊಂಡ ಬಹಳಷ್ಟು ಜನರನ್ನು ಪಾನ ಮುಕ್ತರನ್ನಾಗಿಸುವ ಮೂಲಕ ಕುಟುಂಬಗಳಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದು ಪಾರಿಶ್ವಾಡ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಪಾರಿಶ್ವಾಡ ಗ್ರಾಮದ ಶ್ರೀ ದಾನಮ್ಮದೇವಿ ಮಂಗಲ ಕಾರ್ಯಾಲಯದ ಮಲ್ಲಮ್ಮ ಗುಳಶೆಟ್ಟಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮತಿ ಹಾಗೂ ಪಾನ ಮುಕ್ತರ ಅಭಿನಂದನಾ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮಾತನಾಡಿ, ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದರು. ಪಿಎಸ್‌ಐ ಎಸ್.ಎಸ್.ಬಾದಾಮಿ ಮಾತನಾಡಿದರು. ಜಿ.ಆರ್.ಸೊನೇರ, ನಟರಾಜ ಬಾದಾಮಿ, ಸತೀಶ ನಾಯಕ, ಡಾ.ಜಗದೀಶ ಹಾರುಗೊಪ್ಪ, ಗಣಪತಿ ನಾಯಕ, ಯದುನಂದ ನಾಯಕ, ಶಾಂಭವಿ ಶಾಂಡಿಲೇಶ್ವರಮಠ ಇತರರಿದ್ದರು.