ಕಟಕೋಳ: ಧರ್ಮಸ್ಥಳ ಸಂಸ್ಥೆ ಸಮಾಜ ಸೇವೆ ಮಾಡುವುದರ ಜತೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕಟಕೋಳ ಮುದಕವಿ ವಿರಕ್ತಮಠ ಮಠದ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಸ್ಥಳಿಯ ಬಿ.ಎನ್.ಅಡ್ಡಣಗಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷಿ$್ಮ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಟಕೋಳ ವಲಯದ ತಾಂತ್ರಿಕ ಮತ್ತು ವೃತ್ತಿಪರ ಶಿಣ ಪಡೆಯುತ್ತಿರುವ 13 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಮತ್ತು ಆರೋಗ್ಯರಾ ವಿಮೆ ಕಾರ್ಡ್ ಮಂಜೂರಾತಿ ಪತ್ರ ವಿತರಿಸಲಾಯಿತು.ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ, ಈರನಗೌಡ ಪಾಟೀಲ, ಶಿಕ ಎಂ.ಎಸ್.ಹಗೇದಾಳ ಮಾತನಾಡಿದರು. ಗ್ರಾಪಂ ಅಧ್ಯೆ ಪಾರ್ವತಿ ಪಾಟೋಳಿ, ಗ್ರಾಪಂ ಮಾಜಿ ಉಪಾಧ್ಯ ಬಿ.ಎ.ದೇಸಾಯಿ, ರಮೇಶ ಕಾಡೇಶನವರ, ಸಂಗಮೇಶ ಅಡ್ಡಣಗಿ, ಬಸವರಾಜ ದಿವಟಗಿ, ರಾಜು ಕುಲಕರ್ಣಿ, ರಮೇಶ ಪಾಟೋಳಿ, ಮಲ್ಲಿಕಾರ್ಜುನ ಹಲ್ಯಾಳ, ಮಹಾದೇವಿ ಪಾಟೀಲ ಇತರರಿದ್ದರು. ಶ್ರೀಕಾಂತ ಸ್ವಾಗತಿಸಿದರು. ನಾಗೇಂದ್ರ ನಿರೂಪಿಸಿದರು.