ಶಿರಸಿ: ಮುಸುಕುಧಾರಿ ಹಾಗೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ನಡೆಗಳ ಕುರಿತು ಎಲ್ಲೆಡೆ ವ್ಯಾಪಕ ಸಂಶಯ ಮೂಡುತ್ತಿದೆ. ರಾಜ್ಯ ಸರ್ಕಾರ ಎಸೈಟಿ ರಚಿಸಿ ಈಗಾಗಲೇ ತನಿಖೆ ನಡೆಸಿದಂತೆ ಅಪಪ್ರಚಾರ ಮಾಡಿದವರ ಬಗ್ಗೆಯೂ ಎಸೈಟಿ ತಂಡ ರಚಿಸಿ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನ ವಿಶ್ವ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಧರ್ಮಸ್ಥಳದ ಕುರಿತು ಅವಹೇಳನ, ಅಪಪ್ರಚಾರದ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಇದ್ದಂತೆ ಕಾಣುತ್ತಿದೆ. ಹಿಂದು ಧಾರ್ಮಿಕ ಕ್ಷೇತ್ರದ ಬಗ್ಗೆಯೇ ಇಂತಹ ಅಪಪ್ರಚಾರ ಕಾರ್ಯಗಳು ನಡೆಯುತ್ತಿವೆ. ಎಸ್ ಐ ಟಿ ತನಿಖೆ ನಡೆದರೆ ಸತ್ಯ ಜಗತ್ತಿಗೆ ತಿಳಿದು ಅಪಪ್ರಚಾರ ಮಾಡುವವರ ಬಾಯಿ ಮುಚ್ಚುತ್ತದೆ ಎಂದುಕೊAಡಿದ್ದೆವು. ಆದರೆ, ಈ ಎ ಎಸ್ ಐಟಿ ತಂಡದ ನಡೆಗಳನ್ನು ಗಮನಿಸಿದರೆ ಕಾಂಗ್ರೆಸ್ ಷ್ಟಯಂತ್ರ ನಡೆಸಿರುವ ಸಂಶಯ ಮೂಡುವಂತಿದೆ. ಮುಸುಕುಧಾರಿ ವ್ಯಕ್ತಿ ಗುಂಡಿಗಳನ್ನು ತೋಡುವಾಗ ಪ್ರತಿ ದಿನ ಬೆಳಗ್ಗೆ ಸ್ಥಳಕ್ಕೆ ಹಾಜರಾಗಿ ಸಂಜೆ 5ಕ್ಕೆ ವಾಪಸ್ ತೆರಳುತ್ತಿದ್ದ. ಆತ ಪೊಲೀಸ್ ಕಷ್ಟಡಿಯಲ್ಲಿಇರಬೇಕಿತ್ತಾದರೂ ಸಂಜೆಯ ಮೇಲೆ ಆತ ಎಲ್ಲಿಗೆ ತೆರಳುತ್ತಿದ್ದ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಲಂಗು ಲಗಾಮಿಲ್ಲದಂತೆ ಮಾತನಾಡುತ್ತಿದ್ದಾರೆ. ಅವರಿಗೇಕೆ ಸರ್ಕಾರ ಕಡಿವಾಣ ಏಕೆ ಹಾಕಿರಲಿಲ್ಲ? ಗುಂಡಿ ತೋಡಿ ಏನೂ ಸಿಗದಿದ್ದಾಗಲೂ ಸರ್ಕಾರ ಏಕೆ ಮೌನ ವಹಿಸಿದೆ ? ಗೃಹ ಸಚಿವರು, ಮುಖ್ಯಮಂತ್ರಿಯ ಮೇಲೆ ಕೆಟ್ಟದಾಗಿ ಆರೋಪ ಮಾಡಿದವರನ್ನು ಬಂಧಿಸಲೂ 15 ದಿನಗಳ ಸಮಯ ತೆಗೆದುಕೊಂಡಿದ್ದಾರೆ. ಯೂ ಟ್ಯೂಬರ್ ಮೇಲೆ ಪ್ರಕರಣ ದಾಖಲಾದ ಮೇಲೆ 8 ದಿನಗಳ ಕಾಲ ಬಂಧಿಸದೇ ಇದ್ದುದರಿಂದಲೇ ಆತ ಪರಾರಿಯಾಗಿದ್ದಾನೆ. ಹಿಂದು ಕಾರ್ಯಕರ್ತನೋರ್ವ ಈ ರೀತಿ ಮಾತನಾಡಿದ್ದರೆ ಅಮದೇ ಬಂಧಿಸುವ ಸರ್ಕಾರ ಇವರ ಬಗ್ಗೆ ಮಾತ್ರ ಏಕೆ ಮೃಧು ಧೋರಣೆ ಹೊಂದಿದ್ದಾರೆ ಎಂಬುದನ್ನೂ ಎಸ್ ಐಟಿ ತಂಡ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪ್ರತಿ ದಿನ ಹಿಂದುಗಳ ಭಾವನೆಗೆ ಧಕ್ಕೆ ತರುವ ಕಾರ್ಯ ನಡೆಯುತ್ತಲೇ ಇದೆ. ಯಾವುದೋ ಒಂದು ಗುಂಪು ಬಂದು ಹೇಳಿದ ಮಾತ್ರಕ್ಕೆ ಸರ್ಕಾರ ಎಸ್ ಐ ಟಿ ತನಿಖೆಗೆ ಮುಂದಾದ ಕಾರಣವನ್ನು ಸರ್ಕಾರವೇ ಬಹಿರಂಗಪಡಿಸಲಿ. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ ಎಂಬುದನ್ನು ಸಿ ಎ ಜಿ ವರದಿ ಈಗಾಗಲೇ ಬಹಿರಂಗಪಡಿಸಿದೆ. ಅವೈಜ್ಞಾನಿಕವಾದ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನತೆಯನ್ನು ಮೋಸಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಆದಾಯ ಶೇ. 1.8ರಷ್ಟು ಹೆಚ್ಚಾಗಿದ್ದರೆ ಖರ್ಚು ಶೇ.12 ಪರ್ಸೆಂಟ್ ಹೆಚ್ಚಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದರ ಏರಿಕೆಯ ಮೂಲಕ ಜನಸಾಮಾನ್ಯನ ಬದುಕಿಗೆ ಬರೆ ಎಳೆದಿರುವ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಖಾತೆಗೂ ಹಣ ಹಾಕಿಲ್ಲ. ಇನ್ನೊಂದೆಡೆ 3 ಲಕ್ಷ ಕೋಟಿ ರೂ.ಗಳಷ್ಟನ್ನು ಸಾಲ ಮಾಡಿರುವ ಸರ್ಕಾರ ಸಾಲದ ಹಣವನ್ನೂ ಫಲಾನುಭವಿಗಳಿಗೆ ನೀಡಿಲ್ಲ. ಈ ಹಣವೆಲ್ಲ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯವನ್ನು ಸಿದ್ದರಾಮಯ್ಯ ಸರ್ಕಾರ ದಿವಳಿಯತ್ತ ಒಯ್ಯುತ್ತಿದ್ದಾರೆ ಎಂದರು.
ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ರಸ್ತೆ ಸ್ಥಿತಿಗಳು ಹಾಳಾಗಿವೆ. ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಎಲ್ಲೆಂದರಲ್ಲಿ ಹಾಳಾಗಿ ನಿಲ್ಲತೊಡಗಿವೆ. ಪೊಲೀಸ್, ಅತಿಥಿ ಉಪನ್ಯಾಸಕರಿಗೂ ಸರ್ಕಾರ ಸಂಬಳ ನೀಡುತ್ತಿಲ್ಲ. ಬರುವ ಆದಾಯ ರಾಜ್ಯದಲ್ಲಿ ಬಳಕೆ ಆಗುತ್ತಿಲ್ಲ. ಕರ್ನಾಟಕ ಸರ್ಕಾರವೇ ಅಖಿಲ ಭಾರತ ಕಾಂಗ್ರೆಸ್‌ನ್ನು ಸಾಕುತ್ತಿದೆಯಾ? ಕಾಂಗ್ರೆಸ್‌ಗೆ ಕರ್ನಾಟಕ ಎಡಿಎಂ ಆಗಿದೆಯಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಹಿಂದು ಶ್ರದ್ಧಾ ಕೇಂದ್ರಗಳ ಅವಹೇಳನ ಖಂಡಿಸಿ ಹಾಗೂ ಹಿಂದು ದೇವಾಲಯಗಳ ರಕ್ಷಣೆಗೆ ಆಗ್ರಹಿಸಿ ಬಿಜೆಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಸೋಮವಾರ ಪ್ರತಿಭಟನೆ ನಡೆಸಲಿದೆ. ತಹಸೀಲ್ದಾರರಿಗೆ ಮನವಿ ಸಲ್ಲಿಕೆ ಮಾಡಲಿದೆ ಎಂದರು.
ವಕ್ತಾರ ಸದಾನಂದ ಭಟ್ ನಿಡಗೋಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಆನಂದ ಸಾಲೇರ, ಡ್ಯಾನಿ ಡಿಸೋಜ ಇತರರಿದ್ದರು.