ಜಿಲ್ಲೆ

ಜಯದೇವ ಆಸ್ಪತ್ರೆಗೆ ಧರಂಸಿಂಗ್ ಹೆಸರಿಡಿ

ಬಾಬುರಾವ ಯಡ್ರಾಮಿ


ಕಲಬುರಗಿ: ನಗರದಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ವಿe್ಞÁನ ಮತ್ತು ಸಂಶೋಧನಾ ಕೇಂದ್ರಕ್ಕೆ ಮಾಜಿ ಸಿಎಂ ಎನ್.ಧರ್ಮಸಿಂಗ್ ಹೆಸರಿಡಬೇಕು ಎಂದು ಹಿಂದೂ ಜಾಗೃತಿ ಸೇನೆ ಜಿ¯್ಲÁಧ್ಯP್ಷÀ ಲಕ್ಷಿö್ಮÃಕಾಂತ ಸ್ವಾದಿ ಆಗ್ರಹಿಸಿದರು. ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಕೆಕೆಆರ್‌ಡಿಬಿಯಿಂದ ೧೮೩ ಕೋಟಿ ರೂ. ಅನುದಾನ ನೀಡಲಾಗಿದೆ. ಹೀಗಾಗಿ ಈ ಭಾಗದ ಶ್ರೇಷ್ಠ ನಾಯಕ, ಮಾಜಿ ಸಿಎಂ ಧರ್ಮಸಿಂಗ್ ಹೆಸರು ಸೂಕ್ತವಾಗಿದೆ. ಕೆಕೆಆರ್‌ಡಿಬಿಗೆ ಈಗ ಧರ್ಮಸಿಂಗ್ ಪುತ್ರ ಡಾ.ಅಜಯಸಿಂಗ್ ಅಧ್ಯP್ಷÀರಿz್ದÁರೆ. ಧರ್ಮಸಿಂಗ್ ಹೆಸರಿಡುವುದಕ್ಕೆ ಇದು ಸಕಾಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಗಮನಹರಿಸಿ ಹೆಸರಿಡುವ ಪ್ರಸ್ತಾವನೆಗೆ ಚಾಲನೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಪ್ರಮುಖರಾದ ಸಂತೋಷ ಸೋನಾವಣೆ, ದಶರಥ ಇಂಗೋಳೆ, ಸಂಜನಾ, ಭಾಗ್ಯಶ್ರೀ, ಪ್ರದೀಪ ಚೌದ್ರಿ ಇತರಿದ್ದರು.