ಧಾರವಾಡ: ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಸೆ. ೨೩ರಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಧರ್ಮಸಭೆ ಹಾಗೂ ಅವರ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಕೊಡುಗೆಗಳ ಕುರಿತು ಧಾರವಾಡ ಕನ್ನಡ ಸಾಹಿತ್ಯ ಪರಿಷತ್‌ನಿಂದ ದತ್ತಿ ಉಪನ್ಯಾಸ ಆಯೋಜಿಸಲಾಗಿದೆ ಎಂದು ವೀರಶೈವ ಲಿಂಗಾಯತ ಮುಖಂಡ ಬಸವರಾಜ ವಕ್ಕುಂದ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ಪೂರ್ಣಕುಂಭ, ಆರತಿ, ಭಜನಾ ಮಂಡಳ, ಡೊಳ್ಳುಕುಣಿತ, ಎತ್ತುಗಳ ಮೆರವಣಿಗೆಯೊಂದಿಗೆ ಜಗದ್ಗುರುಗಳ ಭವ್ಯಉತ್ಸವ ಮತ್ತು ಗ್ರಾಮದ ಭಕ್ತರಿಂದ ಸಾಮೂಹಿಕ ಪಾದಪೂಜೆ ನೆರವೇರಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ ಮಾತನಾಡಿ, ಹಿರಿಯ ಸಂಶೋಧಕ, ಕವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅವರು `ಶಾಸನಗಳಲ್ಲಿ ಶ್ರೀಶೈಲ ಪರಂಪರೆ' ಕುರಿತು ಸಂಶೋಧನಾತ್ಮಕ ಉಪನ್ಯಾಸ ನೀಡುವರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ ಮಾತನಾಡಿ, ಸುಳ್ಳ ಗ್ರಾಮದ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯ್ಯಕ್ಷ ಡಾ. ಲಿಂಗರಾಜ ಅಂಗಡಿ ನೇತೃತ್ವ ವಹಿಸುವರು. ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಡಾ. ಎಸ್.ಆರ್. ರಾಮನಗೌಡರ, ಬಸವರಾಜ ಕೌಜಲಗಿ, ಎಸ್.ಎಫ್. ಸಿದ್ದನಗೌಡರ, ಕುರುಬಗಟ್ಟಿ ಶಿವಾನಂದ ಮಠದ ಶಂಭುಲಿAಗ ಮಹಾಸ್ವಾಮೀಜಿ, ಮುರಘಾಮಠದ ಉಚಿತ ಪ್ರಸಾದ ನಿಲಯ ಟ್ರಸ್ಟ್ ನಿರ್ದೇಶಕ ಮಂಜುನಾಥ ಸಾಲಿಮಠ, ಇತರರು ಪಾಲ್ಗೊಳ್ಳುವರು ಎಂದರು.
ವೀರಶೈವ ಜಂಗಮ ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ, ಜಂಗಮ ಸಮಾಜದ ಮುಖಂಡ ಜಿ.ಆರ್. ಹಿರೇಮಠ, ತಮ್ಮಣ್ಣ ಗುಂಡಗೋವಿ, ಪ್ರಭು ಕೆಂಡದಮಠ, ಪಿ.ಎಸ್. ಹಿರೇಮಠ, ಸುನಿಲ ಬಿದರೆ, ಚನ್ನಪ್ಪ ಬ್ಯಾಳಿ, ಇತರರಿದ್ದರು.