ಹೈಡ್ರೋಜ್ ಗಾಂಜಾ ಮಾರಾಟಗಾರರು ಅಂದರ್ 
ಧಾರವಾಡ

ಹೈಡ್ರೋಜ್ ಗಾಂಜಾ ಮಾರಾಟಗಾರರು ಅಂದರ್

ಹುಬ್ಬಳ್ಳಿ: ಹೈಡ್ರೋಜನ್ ಗಾಂಜಾ, ಎಲ್‌ಎಸ್‌ಡಿ ಸೇರಿ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದು, 5,16,300 ರೂ. ಮೌಲ್ಯದ ಮಾದಕ ವಸ್ತು ಸೇರಿ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ಮಂಟೂರ ರೋಡ್‌ನ ಕುಷನ್ ವರ್ಕ್ ಮಾಡುವ ತೌಸೀಫ್‌ಅಕ್ರಮ್ ಹಾಲಬಾವಿ (30), ಪಂಪಾನಗರದ ಸ್ಟಿಚಿಂಗ್ ವರ್ಕ್ ಮಾಡುವ ಸುನೀಲ ರಾಠೋಡ (34) ಬಂಧಿತರು. ಅವರಿಂದ 1.11 ಲಕ್ಷ ರೂ. ಮೌಲ್ಯದ 1ಕೆಜಿ 185 ಗ್ರಾಂ ಗಾಂಜಾ, 20 ಸಾವಿರ ರೂ. ಮೌಲ್ಯದ 27 ಗ್ರಾಂ ಚೆರಸ್, 46 ಸಾವಿರ ರೂ. ಮೌಲ್ಯದ 23 ಎಲ್‌ಎಸ್‌ಡಿ ಪೇಪರ್ ಹಾಗೂ 32 ಸಾವಿರ ರೂ. ಮೌಲ್ಯದ 20 ಗ್ರಾಂ ಹೈಡ್ರೋಜನ್ ಗಾಂಜಾ ಸೇರಿದಂತೆ 2.09 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಹಾಗೂ 3 ಲಕ್ಷ ರೂ. ಮೌಲ್ಯದ ಕಾರು, 3,300 ರೂ. ನಗದು, 4 ಸಾವಿರ ರೂ. ಮೌಲ್ಯದ ಎರಡು ಫೋನ್ ಸೇರಿದಂತೆ ಒಟ್ಟು 5,16,300 ರೂ. ಮೌಲ್ಯದ ಸ್ವತ್ತು ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ್ ನೇತೃತ್ವದ ತಂಡ ಜಪ್ತಿ ಮಾಡಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಡಿಗೇರಿ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದೆ.