ಹುಬ್ಬಳ್ಳಿ: ಉತ್ತರ ಕರ್ನಾಟಕದ ಮನೆಮಾತಾದ ಪ್ರೀತಿ ಸಿಲ್ಕ್ಸ್‌ನ ನೂತನ ಫ್ಲಾೃಗ್‌ಶಿಪ್ ಶೋರೂಮ್ ಉದ್ಘಾಟನಾ ಸಮಾರಂಭ ಕನ್ನಡ ರಾಜ್ಯೋತ್ಸವ ದಿನವಾದ ನ. 1ರಂದು ಬೆಳಗ್ಗೆ 7.30ಕ್ಕೆ ಏರ್ಪಾಟಾಗಿದೆ ಎಂದು ಶೋರೂಮ್ ಮಾಲೀಕ ಮಹೇಶ ಭಂಡಾರಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸುವರು. ಜನಪ್ರತಿನಿಧಿಗಳು ಆಗಮಿಸುವರು. ಹು-ಧಾ ಜನರೇ ನಮಗೆ ‘ ಪ್ರೀತಿಯ ಗೆಸ್ಟ್’. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹತ್ತಿರ ನೂತನ ಶೋರೂಮ್ ಆರಂಭಿಸಿದ್ದು, ಎಲ್ಲರೂ ಆಗಮಿಸುವಂತೆ ಕೋರಿದರು.
50 ಸಾವಿರ ಚದುರಡಿ ಜಾಗದಲ್ಲಿ ಈ ಹೊಸ ಶೋರೂಮ್ ಆರಂಭಿಸಲಾಗುತ್ತಿದೆ. ಇದು ನಮ್ಮ ಎರಡನೇ ಶಾಖೆ. ಇಲ್ಲಿ ಸೀರೆಗಳು, ವಧುವಿನ ಉಡುಪುಗಳು, ವಿವಿಧ ವಿನ್ಯಾಸದ ಮಹಿಳೆಯರ ಹಾಗೂ ಪುರುಷರ ಬಟ್ಟೆಗಳು, ಬೆಳ್ಳಿ ಆಭರಣಗಳು ಒಂದೇ ಸೂರಿನಡಿ ಲಭ್ಯ ಇವೆ ಎಂದರು.
1961ರಲ್ಲಿ ಆರಂಭವಾದ ಪ್ರೀತಿ ಸಿಲ್ಕ್ಸ್, ಗುಣಮಟ್ಟದ ಸೀರೆಗಳು, ಬಟ್ಟೆಗಳನ್ನು ಮಾರಾಟ ಮಾಡುವ ಗ್ರಾಹಕರ ವಿಶ್ವಾಸ ಗಳಿಸಿದೆ. ಹೊಸ ಶೋರೂಮ್‌ನಲ್ಲಿ ಎಕ್ಸ್‌ಪೀರಿಯನ್ಸ್ ಸೆಂಟರ್ ತೆರೆಯಲಾಗಿದ್ದು, ಮೈಸೂರು, ಇಳಕಲ್, ಕಾಂಚೀವರಂ, ಕೋಲ್ಕತ್ತಾ, ಬನಾರಸ್ ಸೇರಿದಂತೆ ಇತರ ಉಡುಪುಗಳ ಹೆಸರುಗಳ ವಿನ್ಯಾಸ ರೂಪಿಸಲಾಗಿದೆ. ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸಲು ಇದು ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟರು.
ರಾಹುಲ್ ಭಂಡಾರಿ, ರಜತ್ ಭಂಡಾರಿ ಸುದ್ದಿಗೋಷ್ಠಿಯಲ್ಲಿದ್ದರು.