ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಇತ್ತೀಚೆಗೆ ಸ್ವಚ್ಚತಾ ಅಭಿಯಾನ ಜರುಗಿತು. 
ಧಾರವಾಡ

ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ಕೊಡಲಿ

ಹುಬ್ಬಳ್ಳಿ: ಮಹಾತ್ಮಗಾಂಧೀಜಿ ಜಯಂತ್ಯುತ್ಸವ ನಿಮಿತ್ತ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಇಲ್ಲಿಯ ಉಣಕಲ್ ಕೆರೆ ಬಳಿ ಇತ್ತೀಚೆಗೆ ಸ್ವಚ್ಛತಾ ಅಭಿಯಾನ ಏರ್ಪಡಿಸಲಾಗಿತ್ತು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ನಮ್ಮ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲದೆ, ಸಮಾಜವೂ ಸ್ವಸ್ಥವಾಗಿರಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ವಿನಂತಿಸಿದರು.

ಐಒಸಿಎಲ್ ಡಿಎಂ ರೋಷನ್ ಸವಾಯಿ, ವ್ಯವಸ್ಥಾಪಕ ಸತೀಶ, ಸಹಾಯಕ ವ್ಯವಸ್ಥಾಪಕ ಅಭಿರಾಮ, ಆಷ್ಫಾಕ್, ಐಒಸಿಎಲ್ ಡೀಲರ್‌ಗಳ ಸಂಘದ ಅಧ್ಯಕ್ಷ ಶಾಂತರಾಜ ಪೋಳ ಇತರರಿದ್ದರು.