ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂಜೀವನಿ ಸೇವಾ ಟ್ರಸ್ಟ್ ಕಮಿಟಿಯ ಒಂದನೇ ವರ್ಷದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. 
ಧಾರವಾಡ

ಪೌರ ಕಾರ್ಮಿಕರಿಗೆ ಸೀರೆ, ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಆವರಣದ ನಿರಂಜನ ಹಾಲ್‌ನಲ್ಲಿ ಸಂಜೀವನಿ ಸೇವಾ ಟ್ರಸ್ಟ್ ಕಮಿಟಿಯ ಒಂದನೇ ವರ್ಷದ ಕಾರ್ಯಕ್ರಮದಲ್ಲಿ ಭಾನುವಾರ ಶ್ರೀಮಠದ ಪೌರ ಕಾರ್ಮಿಕರಿಗೆ ಸೀರೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.

ನರರೋಗ ತಜ್ಞ ಡಾ. ಕ್ರಾಂತಿಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ ಅತಿಥಿಗಳಾಗಿ ಆಗಮಿಸಿದ್ದರು.

ಸಂಜೀವನಿ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿನಾಯಕ ಘೋಡಕೆ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಮಹಾಂತೇಶ ಹಾದಿಮನಿ, ವಿಠ್ಠಲ ಪೋಳ, ಹನಮಂತ ಸೋನೊನೆ, ಮಹಾದೇವ ಪೋಳ, ವಿಜಯ ಹುಟಗಿಕರ, ರಾಘವೇಂದ್ರ ಹುಟಗಿಕರ, ರಾಜೇಶ ಹುಟಗಿ, ಮಂಜುನಾಥ ನಾರಾಯಣಕರ ಇತರರಿದ್ದರು.